ವಿಟ್ಲ : ಪಟಾಕಿ ಶೆಡ್ಡಿನ ಹಿಂಬದಿ ನಿಲ್ಲಿಸಿದ ಬೈಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು - Karavali Times ವಿಟ್ಲ : ಪಟಾಕಿ ಶೆಡ್ಡಿನ ಹಿಂಬದಿ ನಿಲ್ಲಿಸಿದ ಬೈಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು - Karavali Times

728x90

12 November 2026

ವಿಟ್ಲ : ಪಟಾಕಿ ಶೆಡ್ಡಿನ ಹಿಂಬದಿ ನಿಲ್ಲಿಸಿದ ಬೈಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಂಟ್ವಾಳ, ನವಂಬರ್ 12, 2026 (ಕರಾವಳಿ ಟೈಮ್ಸ್) : ವಿಟ್ಲ ಕಸಬಾ ಗ್ರಾಮದ ಬಾಕಿಮಾರು ಗದ್ದೆಯಲ್ಲಿನ ಪಟಾಕಿ ಅಂಗಡಿಯ ಶೆಡ್ಡಿನ ಹಿಂಬದಿ ನಿಲ್ಲಿಸಿದ್ದ ಬೈಕಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನ 11 ರಂದು ಬೆಳಕಿಗೆ ಬಂದಿದೆ. 

ಕೇಪು ಗ್ರಾಮದ ನೀರ್ಕಜೆ ಪಡಿಬಾಗಿಲು ನಿವಾಸಿ ಮನೋಹರ ಅವರು ಈ ಬಗ್ಗೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ವೆಲ್ಡಿಂಗ್ ವೃತ್ತಿಯ ಇವರು ದೀಪಾವಳಿ ಪ್ರಯುಕ್ತ ಬಾಕಿಮಾರು ಗದ್ದೆಯಲ್ಲಿ ಅಳಿಕೆ ನಿವಾಸಿ ಬಾಲಕೃಷ್ಣ ಪಾಟಾಳಿ ಎಂಬವರು ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಪರವಾನಿಗೆ ಪಡೆದು ಶ್ರೀ ಆದಿಲಕ್ಷ್ಮಿ ಎಂಟರ್ ಪ್ರೈಸಸ್ ಎಂಬ ಹೆಸರಿನ ತಾತ್ಕಾಲಿಕ ತಗಡು ಶೆಡ್ ನಿರ್ಮಿಸಿದ ಪಟಾಕಿ ಅಂಗಡಿಯಲ್ಲಿ ಮನೋಹರ ಅವರು 3 ದಿನಗಳಿಂದ ಪಟಾಕಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಅವರು ತನ್ನ ಬೈಕಿನಲ್ಲಿ ಬಂದು ಹೋಗುತ್ತಿದ್ದರು. ನ 11 ರಂದು ರಾತ್ರಿ 12 ಗಂಟೆಗೆ ಅಂಗಡಿ ಮುಚ್ಚಿ ಅಲ್ಲಿ ಮಾರಾಟಕ್ಕಿಟ್ಟಿದ್ದ ಪಟಾಕಿಗಳನ್ನು ದೀಪಾವಳಿ ಮುಗಿದ ಹಿನ್ನಲೆಯಲ್ಲಿ ವಾಹನವೊಂದರಲ್ಲಿ ತುಂಬಿಸಿಕೊಂಡು ಪರವಾನಿಗೆದಾರ ಬಾಲಕೃಷ್ಣ ಪಾಟಾಳಿ ಅವರ ಗೋಡೌನಿಗೆ ತೆಗೆದುಕೊಂಡು ಹೋಗಿದ್ದರು. ಈ ಸಂದರ್ಭ ತನ್ನ ಬೈಕನ್ನು ಪಟಾಕಿ ಶೆಡ್ಡಿನ ಹಿಂಭಾಗದಲ್ಲಿ ನಿಲ್ಲಿಸಿ ಹೋಗಿದ್ದರು. ಬೆಳಿಗ್ಗೆ 9 ಗಂಟೆಗೆ ಬೈಕ್ ತೆಗೆದುಕೊಂಡು ಹೋಗಲು ಬಂದು ನೋಡಿದಾಗ ಬೈಕಿಗೆ ಯಾರೋ ದುಷ್ಕರ್ಮಿಗಳು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವುದು ಕಂಡು ಬಂದಿದೆ. ಬೆಂಕಿಯಿಂದ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರು 90 ಸಾವಿರ ರೂಪಾಯಿ ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಮನೋಹರ ಅವರು ನೀಡದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ : ಪಟಾಕಿ ಶೆಡ್ಡಿನ ಹಿಂಬದಿ ನಿಲ್ಲಿಸಿದ ಬೈಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು Rating: 5 Reviewed By: karavali Times
Scroll to Top