ಕರ್ನಾಟಕ ಮತ್ತು ಗೋವಾ ಸಂಪರ್ಕಿಸುವ ನೂತನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭ - Karavali Times ಕರ್ನಾಟಕ ಮತ್ತು ಗೋವಾ ಸಂಪರ್ಕಿಸುವ ನೂತನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭ - Karavali Times

728x90

11 November 2026

ಕರ್ನಾಟಕ ಮತ್ತು ಗೋವಾ ಸಂಪರ್ಕಿಸುವ ನೂತನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭ

 ಬೆಂಗಳೂರು, ನವಂಬರ್ 11, 2026 (ಕರಾವಳಿ ಟೈಮ್ಸ್) : ಕರ್ನಾಟಕ ಮತ್ತು ಗೋವಾ ನಡುವಿನ ರೈಲು ಸಂಪರ್ಕಕ್ಕೆ ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯವು ಯಶವಂತಪುರ (ಬೆಂಗಳೂರು), ಮಂಗಳೂರು ಮತ್ತು ಮಡಗಾಂವ್ (ಗೋವಾ) ಸಂಪರ್ಕಿಸುವ ನೂತನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಗೆ ಅನುಮೋದನೆ ನೀಡಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಪ್ರಮುಖ ಮಾರ್ಗದಲ್ಲಿ ಪ್ರಯಾಣಿಕರಿಗೆ ವೇಗದ, ಆರಾಮದಾಯಕ ಹಾಗೂ ಅನುಕೂಲಕರ ಪ್ರಯಾಣದ ಆಯ್ಕೆಯನ್ನು ಒದಗಿಸಲಿದೆ.

ಈ ಹಿನ್ನೆಲೆಯಲ್ಲಿ 13 ನವೆಂಬರ್  2026 ರಂದು ಶುಕ್ರವಾರ ಎಸ್ ಎಂ ವಿ ಟಿ ಬೆಂಗಳೂರು, ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ಸಂಪರ್ಕಿಸುವ ಎರಡು ಉದ್ಘಾಟನಾ ವಿಶೇಷ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳು ಸಂಚರಿಸಲಿವೆ.

ಎಸ್ ಎಂ ವಿ ಟಿ ಬೆಂಗಳೂರಿನಿಂದ ಮಡಗಾಂವ್ ಗೆ ತೆರಳುವ ಉದ್ಘಾಟನಾ ವಿಶೇಷ ರೈಲು (ಸಂಖ್ಯೆ 06512) 13:30 ಗಂಟೆಗೆ (ಮಧ್ಯಾಹ್ನ 1:30) ಎಸ್ ಎಂ ವಿ ಟಿ ಬೆಂಗಳೂರಿನಿಂದ ಹೊರಟು, ಮರು ದಿನ 02:55 ಗಂಟೆಗೆ ಮಡಗಾಂವ್ ತಲುಪಲಿದೆ. ಈ ರೈಲು ಮಡಗಾಂವ್ ತಲುಪುವ ಮೊದಲು ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಮತ್ತೊಂದು ಉದ್ಘಾಟನಾ ವಿಶೇಷ ರೈಲು (ಸಂಖ್ಯೆ 06213) 13 ನವೆಂಬರ್ 2026 ರಂದು 13:30 (ಮಧ್ಯಾಹ್ನ 1:30) ಗಂಟೆಗೆ  ಮಂಗಳೂರು ಜಂಕ್ಷನ್ನಿನಿಂದ ಹೊರಟು, ಅದೇ ದಿನ 21:00 (ರಾತ್ರಿ 9) ಗಂಟೆಗೆ  ಎಸ್‍ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲು ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಮತ್ತು ಶ್ರವಣಬೆಳಗೊಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಈ ಎರಡೂ ಉದ್ಘಾಟನಾ ವಿಶೇಷ ರೈಲುಗಳು 16 ಬೋಗಿಗಳನ್ನು ಒಳಗೊಂಡಿರುತ್ತವೆ.

ನಿಯಮಿತ ಸೇವೆ : ಯಶವಂತಪುರ ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್

ಉದ್ಘಾಟನಾ ಸಂಚಾರದ ನಂತರ, ಯಶವಂತಪುರ ಮತ್ತು ಮಡಗಾಂವ್ ನಡುವಿನ ನಿಯಮಿತ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆಯು 15 ನವೆಂಬರ್ 2026 ರಿಂದ ಎರಡೂ ಕಡೆಯಿಂದ (ಅಂದರೆ ಯಶವಂತಪುರ ಮತ್ತು ಮಡಗಾಂವ್ ನಿಂದ) ಪ್ರಾರಂಭವಾಗಲಿದೆ.

ರೈಲು ಸಂಖ್ಯೆ 26655 ಯಶವಂತಪುರದಿಂದ ಮಡಗಾಂವ್ ಗೆ ಹೊರಡುವ ರೈಲು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ಹಾಗೆಯೇ, ರೈಲು ಸಂಖ್ಯೆ 26656 ಮಡಗಾಂವ್ ನಿಂದ ಯಶವಂತಪುರಕ್ಕೆ ಹೊಗುವ ರೈಲು ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ.

ರೈಲು ಸಂಖ್ಯೆ 26655 ಯಶವಂತಪುರ ಜಂಕ್ಷನ್ನಿಂದ 07:35 (ಬೆಳಿಗ್ಗೆ7:35) ಗಂಟೆಗೆ ಹೊರಟು, ಅದೇ ದಿನ 20:55 (ರಾತ್ರಿ 8:55) ಗಂಟೆಗೆ ಮಡಗಾಂವ್ ತಲುಪಲಿದೆ. ಪ್ರಯಾಣ ಮಾರ್ಗದಲ್ಲಿ, ಈ ರೈಲು ಶ್ರವಣ ಬೆಳಗೊಳಕ್ಕೆ 09:03 ಗಂಟೆಗೆ ಬಂದು 09:05 ಗಂಟೆಗೆ ಹೊರಡುತ್ತದೆ; ಹಾಸನಕ್ಕೆ 09:38 ಗಂಟೆಗೆ ಬಂದು 09:40 ಗಂಟೆಗೆ ಹೊರಡುತ್ತದೆ; ಸಕಲೇಶಪುರಕ್ಕೆ 10:20 ಗಂಟೆಗೆ ಬಂದು 10:22 ಗಂಟೆಗೆ ಹೊರಡುತ್ತದೆ; ಸುಬ್ರಹ್ಮಣ್ಯ ರೋಡ್ ಗೆ 12:40 ಗಂಟೆಗೆ ಬಂದು 12:42 ಗಂಟೆಗೆ ಹೊರಡುತ್ತದೆ; ಕಬಕ-ಪುತ್ತೂರಿಗೆ 13:25 ಗಂಟೆಗೆ ಬಂದು 13:27 ಗಂಟೆಗೆ ಹೊರಡುತ್ತದೆ; ಮಂಗಳೂರು ಜಂಕ್ಷನ್ನಿಗೆ 15:05 ಗಂಟೆಗೆ ಬಂದು 15:15 ಗಂಟೆಗೆ ಹೊರಡುತ್ತದೆ; ಉಡುಪಿಗೆ 16:20 ಗಂಟೆಗೆ ಬಂದು 16:22 ಗಂಟೆಗೆ ಹೊರಡುತ್ತದೆ; ಕುಂದಾಪುರಕ್ಕೆ 16:38 ಗಂಟೆಗೆ ಬಂದು 16:40 ಗಂಟೆಗೆ ಹೊರಡುತ್ತದೆ; ಮೂಕಾಂಬಿಕಾ ರೋಡ್ ಬೈಂದೂರಿಗೆ 17:20 ಗಂಟೆಗೆ ಬಂದು 17:22 ಗಂಟೆಗೆ ಹೊರಡುತ್ತದೆ; ಮುರ್ಡೇಶ್ವರಕ್ಕೆ 18:00 ಗಂಟೆಗೆ ಬಂದು 18:02 ಗಂಟೆಗೆ ಹೊರಡುತ್ತದೆ; ಗೋಕರ್ಣ ರೋಡ್‍ಗೆ 19:00 ಗಂಟೆಗೆ ಬಂದು 19:02 ಗಂಟೆಗೆ ಹೊರಡುತ್ತದೆ; ಮತ್ತು ಕಾರವಾರಕ್ಕೆ 19:45 ಗಂಟೆಗೆ ಬಂದು 19:47 ಗಂಟೆಗೆ ಹೊರಡುತ್ತದೆ. ಅಂತಿಮವಾಗಿ, ಈ ರೈಲು 20:55 (ರಾತ್ರಿ 8:55) ಗಂಟೆಗೆ ಮಡಗಾಂವ್ ತಲುಪಲಿದೆ.

ಮರು ಸಂಚಾರದಲ್ಲಿ, ರೈಲು ಸಂಖ್ಯೆ 26656 ಮಡಗಾಂವ್ ನಿಂದ 08:20 (ಬೆಳಿಗ್ಗೆ 8:20) ಗಂಟೆಗೆ ಹೊರಟು, ಅದೇ ದಿನ 21:15 (ರಾತ್ರಿ 9:15) ಗಂಟೆಗೆ ಯಶವಂತಪುರ ಜಂಕ್ಷನ್ ತಲುಪಲಿದೆ. ಪ್ರಯಾಣ ಮಾರ್ಗದಲ್ಲಿ, ಈ ರೈಲು ಕಾರವಾರಕ್ಕೆ 09:03 ಗಂಟೆಗೆ ಬಂದು 09:05 ಗಂಟೆಗೆ ಹೊರಡುತ್ತದೆ; ಗೋಕರ್ಣ ರೋಡ್ ಗೆ 09:48 ಗಂಟೆಗೆ ಬಂದು 09:50 ಗಂಟೆಗೆ ಹೊರಡುತ್ತದೆ; ಮುರ್ಡೇಶ್ವರಕ್ಕೆ 11:00 ಗಂಟೆಗೆ ಬಂದು 11:02 ಗಂಟೆಗೆ ಹೊರಡುತ್ತದೆ; ಮೂಕಾಂಬಿಕಾ ರೋಡ್ ಬೈಂದೂರಿಗೆ 11:20 ಗಂಟೆಗೆ ಬಂದು 11:22 ಗಂಟೆಗೆ ಹೊರಡುತ್ತದೆ; ಕುಂದಾಪುರಕ್ಕೆ 11:48 ಗಂಟೆಗೆ ಬಂದು 11:50 ಗಂಟೆಗೆ ಹೊರಡುತ್ತದೆ; ಉಡುಪಿಗೆ 12:18 ಗಂಟೆಗೆ ಬಂದು 12:20 ಗಂಟೆಗೆ ಹೊರಡುತ್ತದೆ; ಮಂಗಳೂರು ಜಂಕ್ಷನ್ನಿಗೆ 13:50 ಗಂಟೆಗೆ ಬಂದು 14:00 ಗಂಟೆಗೆ ಹೊರಡುತ್ತದೆ; ಕಬಕ-ಪುತ್ತೂರಿಗೆ 14:43 ಗಂಟೆಗೆ ಬಂದು 14:45 ಗಂಟೆಗೆ ಹೊರಡುತ್ತದೆ; ಸುಬ್ರಹ್ಮಣ್ಯ ರೋಡ್ ಗೆ 15:28 ಗಂಟೆಗೆ ಬಂದು 15:30 ಗಂಟೆಗೆ ಹೊರಡುತ್ತದೆ; ಸಕಲೇಶಪುರಕ್ಕೆ 17:30 ಗಂಟೆಗೆ ಬಂದು 17:32 ಗಂಟೆಗೆ ಹೊರಡುತ್ತದೆ; ಹಾಸನಕ್ಕೆ 18:13 ಗಂಟೆಗೆ ಬಂದು 18:15 ಗಂಟೆಗೆ ಹೊರಡುತ್ತದೆ; ಮತ್ತು ಶ್ರವಣಬೆಳಗೊಳಕ್ಕೆ 18:43 ಗಂಟೆಗೆ ಬಂದು 18:45 ಗಂಟೆಗೆ ಹೊರಡುತ್ತದೆ. ಅಂತಿಮವಾಗಿ, ಈ ರೈಲು 21:15 (ರಾತ್ರಿ 9:15) ಗಂಟೆಗೆ ಯಶವಂತಪುರ ಜಂಕ್ಷನ್ ತಲುಪಲಿದೆ.

16 ಬೋಗಿಗಳನ್ನು ಹೊಂದಿರುವ ಈ ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಎಕ್ಸಿಕ್ಯೂಟಿವ್ ಚೇರ್ ಕಾರ್ ಮತ್ತು ಚೇರ್ ಕಾರ್ ಬೋಗಿಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆಧುನಿಕ ಹಾಗೂ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲಿದೆ.

ಈ ಸೇವೆಯ ಆರಂಭದಿಂದ ಬೆಂಗಳೂರು, ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಗೋವಾ ನಡುವಿನ ಸಂಪರ್ಕವು ಗಣನೀಯವಾಗಿ ಸುಧಾರಿಸಲಿದ್ದು, ಪ್ರವಾಸಿಗರು, ವ್ಯಾಪಾರಿಗಳು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಉಡುಪಿ, ಕೊಲ್ಲೂರು (ಮೂಕಾಂಬಿಕಾ), ಮುರ್ಡೇಶ್ವರ, ಗೋಕರ್ಣ, ಕಾರವಾರ ಮತ್ತು ಮಡಗಾಂವ್ ನಂತಹ ಪ್ರಮುಖ ಪ್ರವಾಸಿ ತಾಣಗಳಿಗೆ ಸುಲಭ ಸಂಪರ್ಕ ದೊರೆಯಲಿದೆ.

ಈ ನೂತನ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆಯ ಮೂಲಕ ಭಾರತೀಯ ರೈಲ್ವೆ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವ ಮತ್ತು ಪ್ರಯಾಣಿಕರಿಗೆ ವೇಗದ, ಆಧುನಿಕ ಹಾಗೂ ಪ್ರಯಾಣಿಕ ಸ್ನೇಹಿ ರೈಲು ಸೇವೆಗಳನ್ನು ಒದಗಿಸುವ ತನ್ನ ಪ್ರಯತ್ನವನ್ನು ಮುಂದುವರಿಸಿದೆ.

ಸೂಚನೆ : ಈ ನೂತನ ಸೇವೆ ಆರಂಭವಾಗುವುದರೊಂದಿಗೆ, ಪ್ರಸ್ತುತ ಸಂಚರಿಸುತ್ತಿರುವ ರೈಲು ಸಂಖ್ಯೆ 20645/20646 ಮಡಗಾಂವ್-ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆಯನ್ನು 15 ನವೆಂಬರ್ 2026ರಿಂದ ಎರಡೂ ದಿಕ್ಕುಗಳಲ್ಲಿ (ಅಂದರೆ ಮಡಗಾಂವ್ ಮತ್ತು ಮಂಗಳೂರು ಸೆಂಟ್ರಲ್) ರದ್ದುಗೊಳಿಸಲಾಗುವುದು ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕ ಮತ್ತು ಗೋವಾ ಸಂಪರ್ಕಿಸುವ ನೂತನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭ Rating: 5 Reviewed By: karavali Times
Scroll to Top