ಬೆಂಗಳೂರು, ನವಂಬರ್ 04, 2026 (ಕರಾವಳಿ ಟೈಮ್ಸ್) : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಯಶವಂತಪುರ-ಮಡಗಾಂವ್ ಮತ್ತು ಮಡಗಾಂವ್-ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲು ಸೇವೆಗಳನ್ನು ಒದಗಿಸಲಿದೆ. ಪ್ರತಿ ಮಾರ್ಗದಲ್ಲಿಯೂ ತಲಾ ಒಂದು ಪ್ರಯಾಣ (ಟ್ರಿಪ್) ಇರುತ್ತದೆ.
ರೈಲು ಸಂಖ್ಯೆ 06591 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‍ಪ್ರೆಸ್ ರೈಲು, ನವೆಂಬರ್ 6, ಶುಕ್ರವಾರದಂದು 23.55ಕ್ಕೆ ಯಶವಂತಪುರದಿಂದ ಹೊರಟು, ನವೆಂಬರ್ 7, ಶನಿವಾರ 18.10ಕ್ಕೆ ಮಡಗಾಂವ್ ತಲುಪಲಿದೆ.
ರೈಲು ಸಂಖ್ಯೆ 06592 ಮಡಗಾಂವ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‍ಪ್ರೆಸ್ ರೈಲು, ನವೆಂಬರ್ 8, ಭಾನುವಾರದಂದು 11 ಗಂಟೆಗೆ ಮಡಗಾಂವ್ ನಿಂದ ಹೊರಟು, ನವೆಂಬರ್ 9, ಸೋಮವಾರದಂದು 5.20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಈ ರೈಲುಗಳು ಎರಡೂ ಮಾರ್ಗಗಳಲ್ಲಿ ಈ ಕೆಳಗಿನ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ : ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟವಾಳ, ಮಂಗಳೂರು ಜಂಕ್ಷನ್, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಮತ್ತು ಕಣಕೋಣ.
ಮರು ಪ್ರಯಾಣದ ವೇಳೆ ರೈಲು ಸಂಖ್ಯೆ 06592 ಯಶವಂತಪುರದಲ್ಲಿ ನಿಲುಗಡೆಯನ್ನು ಹೊಂದಿರುವುದಿಲ್ಲ. ಆದಾಗ್ಯೂ, ಎಸ್‍ಎಂವಿಟಿ ಬೆಂಗಳೂರಿನಲ್ಲಿ ನಿಲುಗಡೆಗೊಳ್ಳಲಿದೆ.
ಈ ವಿಶೇಷ ರೈಲಿನಲ್ಲಿ ಒಟ್ಟು 19 ಬೋಗಿಗಳಿರಲಿದ್ದು, ಇದರಲ್ಲಿ ಎಸಿ, ಸ್ಲೀಪರ್ ಕ್ಲಾಸ್ ಮತ್ತು ಜನರಲ್ ಕ್ಲಾಸ್ ಹಾಗೂ ಲಗೇಜ್-ಕಂ-ಬ್ರೇಕ್ ವ್ಯಾನ್ ಬೋಗಿಗಳೊಂದಿಗೆ ದಿವ್ಯಾಂಗ ಚೇತನರಿಗಾಗಿ ಮೀಸಲಾದ ಬೋಗಿಯೂ ಇರಲಿದೆ.











0 comments:
Post a Comment