ಡಿಸೆಂಬರ್ ತಿಂಗಳಲ್ಲಿ ಕರಾವಳಿ ಉತ್ಸವ : ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಸಚಿವ ಯು.ಟಿ. ಖಾದರ್ ಸೂಚನೆ - Karavali Times ಡಿಸೆಂಬರ್ ತಿಂಗಳಲ್ಲಿ ಕರಾವಳಿ ಉತ್ಸವ : ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಸಚಿವ ಯು.ಟಿ. ಖಾದರ್ ಸೂಚನೆ - Karavali Times

728x90

1 November 2026

ಡಿಸೆಂಬರ್ ತಿಂಗಳಲ್ಲಿ ಕರಾವಳಿ ಉತ್ಸವ : ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಸಚಿವ ಯು.ಟಿ. ಖಾದರ್ ಸೂಚನೆ


ಮಂಗಳೂರು, ನವೆಂಬರ್ 02, 2026 (ಕರಾವಳಿ ಟೈಮ್ಸ್) : ಈ ವರ್ಷದ ಕರಾವಳಿ ಉತ್ಸವವು ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು, ಜನ ಆಕರ್ಷಣೆಗೊಳ್ಳುವಂತಹ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ. 

ನ 1 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರಾವಳಿ ಉತ್ಸವ ನಡೆಸುವ ಸಂಬಂಧ ನಡೆಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಕರಾವಳಿ ಉತ್ಸವದಲ್ಲಿ ಕರಾವಳಿಯ ವಿಶಿಷ್ಟ ಜಾನಪದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿಯುವ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

 ಯುವಜನತೆ, ಹಿರಿಯರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸ್ಥಳೀಯ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಮತ್ತು ರಾಷ್ಟ್ರೀಯ ಮಟ್ಟದ ಕಲಾವಿದರ ಸಾಂಸ್ಕೃತಿಕ ತಂಡಗಳ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕರಾವಳಿಯ ಸಾಂಪ್ರದಾಯಿಕ ಕ್ರೀಡಾಕೂಟಗಳು, ಕಡಲತೀರದ (ಬೀಚ್) ಉತ್ಸವಗಳು ಹಾಗೂ ಕರಾವಳಿಯ ಖಾದ್ಯಗಳ ವೈವಿಧ್ಯಮಯ 'ಆಹಾರ ಮೇಳ' ವನ್ನು ವಿಶೇಷವಾಗಿ ಹಮ್ಮಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು. 

ಈ ವರ್ಷದ ಕರಾವಳಿ ಉತ್ಸವದಲ್ಲಿ ಆಯೋಜಿಸಲು ಸಚಿವರು ನೀಡಿದ ಮುಖ್ಯ ಸೂಚನೆಗಳು ಮತ್ತು ಪ್ರಮುಖ ಆಕರ್ಷಣೆಗಳ ವಿವರ ಇಲ್ಲಿದೆ :


ಹೆಲಿಕಾಪ್ಟರ್ ರೈಡ್, ಟ್ರಯಾಥ್ಲಾನ್ (Triathlon), ವಿಂಟೇಜ್ ಕಾರ್ ರ‍್ಯಾಲಿ, ಬೈಕ್ ರೈಡರ್ಸ್ ಸಾಹಸ ಪ್ರದರ್ಶನ ಹಾಗೂ ಯೋಗ ಅಭ್ಯಾಸ.

 ಆಹಾರ ಹಾಗೂ ತೋಟಗಾರಿಕೆ ಮೇಳ,  ರುಚಿ ರುಚಿಯಾದ ಸ್ಟ್ರೀಟ್ ಫುಡ್ ಫೆಸ್ಟಿವಲ್, ಕರಾವಳಿ ಶೈಲಿಯ ಸೀಫುಡ್ (ಸಮುದ್ರಾಹಾರ) ಫೆಸ್ಟಿವಲ್ ಹಾಗೂ ನಯನ ಮನೋಹರ 'ಫ್ರೂಟ್ ಅಂಡ್ ಫ್ಲವರ್ ಶೋ' (ಹಣ್ಣು ಮತ್ತು ಪುಷ್ಪ ಪ್ರದರ್ಶನ).

 ಸಾಂಸ್ಕೃತಿಕ ಹಾಗೂ ರಂಜನೆ, ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು, ಸಂಗೀತ ಕಾರ್ಯಕ್ರಮಗಳು, ಮನರಂಜನಾ ರಸಮಂಜರಿ, ಚಲನಚಿತ್ರ ಉತ್ಸವ ಹಾಗೂ ಜಾನಪದ ಉತ್ಸವ.

  ವಿಶೇಷ ಪ್ರದರ್ಶನಗಳು :

 ನಾಯಿಗಳ ಪ್ರದರ್ಶನ (ಡಾಗ್ ಶೋ) ಮತ್ತು ಸ್ಥಳೀಯ ಜಾನುವಾರುಗಳ ಪ್ರದರ್ಶನ.


 ತುಳು ಭಾಷೆಗೆ ವಿಶೇಷ ಆದ್ಯತೆ :


ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ, ತುಳು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅದ್ದೂರಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲು ಸಚಿವರು ನಿರ್ದೇಶನ ನೀಡಿದರು.

 ಮಹಿಳೆಯರಿಗಾಗಿ ವಿಭಿನ್ನ ಹಾಗೂ ವಿಶೇಷ ಸ್ಪರ್ಧೆ/ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಯಿತು.

ಸಭೆಯಲ್ಲಿ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್,  ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ನಾರ್ವಾಡೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಅಪರ ಜಿಲ್ಲಾಧಿಕಾರಿ ರಾಜು ಸಹಿತ ವಿವಿಧ ಇಲಾಖಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಡಿಸೆಂಬರ್ ತಿಂಗಳಲ್ಲಿ ಕರಾವಳಿ ಉತ್ಸವ : ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಸಚಿವ ಯು.ಟಿ. ಖಾದರ್ ಸೂಚನೆ Rating: 5 Reviewed By: lk
Scroll to Top