ಬೆಂಗಳೂರು, ನವಂಬರ್ 01, 2026 (ಕರಾವಳಿ ಟೈಮ್ಸ್) : 71ನೇ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೈಚಾಪುರ ಶಾಲೆಯ ಮಕ್ಕಳು ಒನಕೆ ಓಬವ್ವ ನಾಟಕ ಪ್ರದರ್ಶನ ತಂಡಕ್ಕೆ 10 ಸಾವಿರ ನಗದು ಬಹುಮಾನ ಹಾಗೂ ಉಳಿದ ಐದು ಶಾಲೆಗಳ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಲಾ 5 ಸಾವಿರ ರೂಪಾಯಿ ನಗದು ಹಣವನ್ನು ನೀಡುವ ಮೂಲಕ ಸಚಿವ ಕೆ ಎಚ್ ಮುನಿಯಪ್ಪ ಮಕ್ಕಳನ್ನು ಪೆÇ್ರೀತ್ಸಾಹಿಸಿ ಅಭಿನಂದಿಸಿದರು.
ಶಾಲಾ ಮಕ್ಕಳು ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ವೀಕ್ಷಿಸಿ ಮಕ್ಕಳ ಪ್ರತಿಭೆಯನ್ನು ಪ್ರಶಂಸಿಸಿದರು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದ ಸಚಿವರು, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ತಂಡಕ್ಕೆ 10 ಸಾವಿರ ರೂಪಾಯಿ ಹಾಗೂ ಉಳಿದ ತಂಡಗಳಿಗೆ ತಲಾ 5, ಸಾವಿರ ರೂಪಾಯಿಗಳನ್ನು ವೈಯಕ್ತಿಕ ಪೆÇ್ರೀತ್ಸಾಹಧನ ನೀಡಿದರು. ಸಚಿವರ ಈ ಪೆÇ್ರೀತ್ಸಾಹದಿಂದ ಮಕ್ಕಳು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಪೆÇೀಷಕರು ಹಾಗೂ ಶಿಕ್ಷಕರು ಸಚಿವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

















0 comments:
Post a Comment