ಬರಿಮಾರು-ಕಾಗೆಕಾನ ರಸ್ತೆ 20 ಲಕ್ಷ ಅನುದಾನದಲ್ಲಿ ಅಭಿವೃದ್ದಿ : ಕಾಮಗಾರಿಗೆ ಶಾಸಕ ನಾಯಕ್ ಚಾಲನೆ - Karavali Times ಬರಿಮಾರು-ಕಾಗೆಕಾನ ರಸ್ತೆ 20 ಲಕ್ಷ ಅನುದಾನದಲ್ಲಿ ಅಭಿವೃದ್ದಿ : ಕಾಮಗಾರಿಗೆ ಶಾಸಕ ನಾಯಕ್ ಚಾಲನೆ - Karavali Times

728x90

1 November 2026

ಬರಿಮಾರು-ಕಾಗೆಕಾನ ರಸ್ತೆ 20 ಲಕ್ಷ ಅನುದಾನದಲ್ಲಿ ಅಭಿವೃದ್ದಿ : ಕಾಮಗಾರಿಗೆ ಶಾಸಕ ನಾಯಕ್ ಚಾಲನೆ

 ಬಂಟ್ವಾಳ, ನವಂಬರ್ 01, 2026 (ಕರಾವಳಿ ಟೈಮ್ಸ್) : ಬರಿಮಾರು ಗ್ರಾಮದ ಕಾಗೆಕಾನ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ 30 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದ್ದು, ಈ ಅಭಿವೃದ್ಧಿ ಕಾಮಗಾರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು ನಮ್ಮ ಆದ್ಯತೆಯಾಗಿದೆ. ಉತ್ತಮ ರಸ್ತೆ ಸಂಪರ್ಕವು ಜನರ ದೈನಂದಿನ ಸಂಚಾರಕ್ಕೆ ಮಾತ್ರವಲ್ಲದೆ, ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರ ಅಗತ್ಯಗಳಿಗೂ ಬಹಳ ಮುಖ್ಯವಾಗಿದೆ. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಒದಗಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು. 

ಈ ಸಂದರ್ಭ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ದೇವಪ್ಪ ಪೂಜಾರಿ, ಜಿನರಾಜ್ ಕೋಟ್ಯಾನ್, ಮಾಧವ ಮಾವೆ, ಕಮಲಾಕ್ಷಿ ಕೆ ಪೂಜಾರಿ, ಗಣೇಶ್ ಬುರ್ದು, ದಿನರಾಜ್, ಸದಾಶಿವ ಜಿ ಬರಿಮಾರು ಮೊದಲಾದವರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬರಿಮಾರು-ಕಾಗೆಕಾನ ರಸ್ತೆ 20 ಲಕ್ಷ ಅನುದಾನದಲ್ಲಿ ಅಭಿವೃದ್ದಿ : ಕಾಮಗಾರಿಗೆ ಶಾಸಕ ನಾಯಕ್ ಚಾಲನೆ Rating: 5 Reviewed By: karavali Times
Scroll to Top