ಸುಳ್ಯದಲ್ಲೊಂದು ದಾರುಣ ಘಟನೆ : ಸಂಬಂಧಿ ಯುವಕ ಕಾರನ್ನು ಹಿಮ್ಮುಖ ಚಲಾಯಿಸಿದ ವೇಳೆ ಕಾರಿನಡಿಗೆ ಸಿಲುಕಿ ಮಹಿಳೆ ಮೃತ್ಯು - Karavali Times ಸುಳ್ಯದಲ್ಲೊಂದು ದಾರುಣ ಘಟನೆ : ಸಂಬಂಧಿ ಯುವಕ ಕಾರನ್ನು ಹಿಮ್ಮುಖ ಚಲಾಯಿಸಿದ ವೇಳೆ ಕಾರಿನಡಿಗೆ ಸಿಲುಕಿ ಮಹಿಳೆ ಮೃತ್ಯು - Karavali Times

728x90

11 November 2026

ಸುಳ್ಯದಲ್ಲೊಂದು ದಾರುಣ ಘಟನೆ : ಸಂಬಂಧಿ ಯುವಕ ಕಾರನ್ನು ಹಿಮ್ಮುಖ ಚಲಾಯಿಸಿದ ವೇಳೆ ಕಾರಿನಡಿಗೆ ಸಿಲುಕಿ ಮಹಿಳೆ ಮೃತ್ಯು

ಸುಳ್ಯ, ನವಂಬರ್ 11, 2026 (ಕರಾವಳಿ ಟೈಮ್ಸ್) : ಸಂಬಂಧಿಕ ಯುವಕ ಕಾರು ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕಾರಿನಡಿಗೆ ಸಿಲುಕಿ ಮಹಿಳೆ ಮೃತಪಟ್ಟ ದಾರುಣ ಘಟನೆ ಸುಳ್ಯ ಕಸಬಾ ಗ್ರಾಮದಲ್ಲಿ ನ 11 ರಂದು ಸಂಭವಿಸಿದೆ.

ಮೃತ ಮಹಿಳೆಯನ್ನು ಕಮರುನ್ನಿಸಾ (46) ಎಂದು ಹೆಸರಿಸಲಾಗಿದೆ. ಇವರನ್ನು ಸಂಬಂಧಿಕ ಮಹರೂಫ್ ಎಂಬಾತ ಮಹಿಳೆ ಕೆಲಸ ಮಾಡುತ್ತಿದ್ದ ಸ್ಥಳದಿಂದ ಕಾರಿನಲ್ಲಿ ಮನೆಗೆ ಕರೆ ತಂದಿದ್ದು, ಕಾರಿನಿಂದ ಇಳಿದ ಕಮರುನ್ನಿಸಾ ಅವರು ಕಾರಿನ ಹಿಂಬದಿಗೆ ಬಂದಾಗ ಮಹರೂಫ್ ಅವರು ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕಮರುನ್ನೀಸಾ ಅವರು ಕಾರಿನ ಹಿಂಬದಿ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮೃತರ ಪುತ್ರ ಕಮಾಲುದ್ದೀನ್ ಅವರು ನೀಡಿದ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯದಲ್ಲೊಂದು ದಾರುಣ ಘಟನೆ : ಸಂಬಂಧಿ ಯುವಕ ಕಾರನ್ನು ಹಿಮ್ಮುಖ ಚಲಾಯಿಸಿದ ವೇಳೆ ಕಾರಿನಡಿಗೆ ಸಿಲುಕಿ ಮಹಿಳೆ ಮೃತ್ಯು Rating: 5 Reviewed By: karavali Times
Scroll to Top