ಬಂಟ್ವಾಳ, ನವಂಬರ್ 11, 2026 (ಕರಾವಳಿ ಟೈಮ್ಸ್) : ಕನ್ಯಾನ ಗ್ರಾಮದ ಪಾದೆಕಲ್ಲು ಎಂಬಲ್ಲಿ ಜಾನುವಾರು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ನಾಲ್ವರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ನ 10 ರಂದು ರಾತ್ರಿ ನಡೆದಿದೆ.
ಆರೋಪಿಗಳನ್ನು ಬೊಲೆರೋ ಪಿಕಪ್ ವಾಹನ ಚಾಲಕ ಒ ಪಿ ಅಬ್ದುಲ್ಲಾ (45), ವಾಹನದಲ್ಲಿದ್ದ ಸುಬ್ರಮಣ್ಯ (55), ಉಷಾ ಎಸ್ ಶೆಟ್ಟಿ ಹಾಗೂ ಗುರುತೇಜ ಎಂದು ಹೆಸರಿಸಲಾಗಿದೆ. ನ 10 ರಂದು ರಾತ್ರಿ ಕನ್ಯಾನ ಗ್ರಾಮದ ಪಾದೆಕಲ್ಲು ಚೆಕ್ ಪಾಯಿಂಟ್ ನಲ್ಲಿ ವಿಟ್ಲ ಪೊಲೀಸರು ಕರ್ತವ್ಯದಲ್ಲಿದ್ದಾಗ ಅದೇ ಮಾರ್ಗವಾಗಿ ಬಂದ ಬೊಲೆರೋ ಪಿಕಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಒಂದು ಜಾನುವಾರನ್ನು ಕಳವು ಮಾಡಿಕೊಂಡು ಅಕ್ರಮ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ವಾಹನ ಚಾಲಕ ಒ ಪಿ ಅಬ್ದುಲ್ಲ ಹಾಗೂ ಅದರಲ್ಲಿದ್ದ ಸುಬ್ರಮಣ್ಯ ಅವರು ಜಾನುವಾರು ಸಾಗಾಟ ಮಾಡಿದ್ದು, ಸ್ಥಳಕ್ಕೆ ಕಾರಿನಲ್ಲಿ ಬಂದ ಉಷಾ ಎಸ್ ಶೆಟ್ಟಿ ಹಾಗೂ ಗುರುತೇಜ ಅವರ ಸೂಚನೆ ಮೇರೆಗೆ ಈ ಜಾನುವಾರು ಸಾಗಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜಾನುವಾರು ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡ ವಿಟ್ಲ ಪೊಲೀಸರು ನಾಲ್ವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.













0 comments:
Post a Comment