ಕಂಬಳ ಕ್ಷೇತ್ರದಲ್ಲಿ 39 ವರ್ಷಗಳ ಅನನ್ಯ ಸೇವೆ : ಅಲ್ಲಿಪಾದೆ ವಿನ್ಸೆಂಟ್ ಪಿಂಟೋ ಅವರಿಗೆ ಜಿಲ್ಲಾ ರಾಜ್ಯೋತ್ಸವ ಗೌರವ - Karavali Times ಕಂಬಳ ಕ್ಷೇತ್ರದಲ್ಲಿ 39 ವರ್ಷಗಳ ಅನನ್ಯ ಸೇವೆ : ಅಲ್ಲಿಪಾದೆ ವಿನ್ಸೆಂಟ್ ಪಿಂಟೋ ಅವರಿಗೆ ಜಿಲ್ಲಾ ರಾಜ್ಯೋತ್ಸವ ಗೌರವ - Karavali Times

728x90

1 November 2026

ಕಂಬಳ ಕ್ಷೇತ್ರದಲ್ಲಿ 39 ವರ್ಷಗಳ ಅನನ್ಯ ಸೇವೆ : ಅಲ್ಲಿಪಾದೆ ವಿನ್ಸೆಂಟ್ ಪಿಂಟೋ ಅವರಿಗೆ ಜಿಲ್ಲಾ ರಾಜ್ಯೋತ್ಸವ ಗೌರವ

ಬಂಟ್ವಾಳ, ನವಂಬರ್ 01, 2026 (ಕರಾವಳಿ ಟೈಮ್ಸ್) : ಕರಾವಳಿಯ ಪ್ರಸಿದ್ದ ಜಾನಪದ ಕ್ರೀಡೆಯಾಗಿರುವ ಕಂಬಳ ಕ್ಷೇತ್ರದಲ್ಲಿ ಕಳೆದ 39 ವರ್ಷಗಳಳಿಂದ ಅವಿರತ ಸೇವೆ ಸಲ್ಲಿಸುತ್ತಾ ಬಂದಿರುವ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಕೆಳಗಿನಮನೆ ನಿವಾಸಿ ವಿನ್ಸೆಂಟ್ ಪಿಂಟೋ ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ದೊರೆತಿದೆ. 

ಕಂಬಳ ಕ್ಷೇತ್ರದಲ್ಲಿ ಕಳೆದ 39 ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ವಿನ್ಸೆಂಟ್ ಪಿಂಟೋ ಅವರು ಕಂಬಳದ ಕಣದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕಂಬಳದ ಮೇಲಿನ ಅಪಾರ ಪ್ರೀತಿ, ಅಭಿಮಾನ ಮತ್ತು ಸಮರ್ಪಣಾ ಮನೋಭಾವದಿಂದ ಈ ಸಾಂಪ್ರದಾಯಿಕ ಕ್ರೀಡೆಯೊಂದಿಗೆ ಸುದೀರ್ಘ ಪಯಣ ನಡೆಸಿರುವ ಇವರು, ಕೋಣಗಳ ಮಾಲೀಕರಾಗಿಯೂ ಹಾಗೂ ಸ್ವತಃ ಓಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.

ಕಂಬಳ ಕ್ಷೇತ್ರದಲ್ಲಿ 39 ವರ್ಷಗಳ ಸುದೀರ್ಘ ಅನುಭವದ ಜೊತೆಗೆ ಕೋಣಗಳ ಮಾಲಿಕರಾಗಿ 90ಕ್ಕೂ ಅಧಿಕ ಪದಕಗಳ ಸಾಧನೆ ಮಾಡಿದ್ದು, ಸ್ವತಃ ಓಟಗಾರರಾಗಿ 30ಕ್ಕೂ ಅಧಿಕ ಪದಕಗಳ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಕೋಣಗಳ ಮಾಲಿಕರಾಗಿ ಹೆಸರುಗಳಿಸಿರುವ ಇವರು ಸ್ವತಃ ಓಟಗಾರರಾಗಿಯೂ ಕಂಬಳದ ಕಣದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಂಬಳ ಕ್ಷೇತ್ರದಲ್ಲಿ 39 ವರ್ಷಗಳ ಅನನ್ಯ ಸೇವೆ : ಅಲ್ಲಿಪಾದೆ ವಿನ್ಸೆಂಟ್ ಪಿಂಟೋ ಅವರಿಗೆ ಜಿಲ್ಲಾ ರಾಜ್ಯೋತ್ಸವ ಗೌರವ Rating: 5 Reviewed By: karavali Times
Scroll to Top