ತೆಂಕಕಜೆಕಾರು : ನಾಯಿ ಅಡ್ಡ ಬಂದು ಉರುಳಿ ಬಿದ್ದ ಅಟೋ ರಿಕ್ಷಾ, ಓರ್ವ ಪ್ರಯಾಣಿಕ ಆಸ್ಪತ್ರೆಗೆ - Karavali Times ತೆಂಕಕಜೆಕಾರು : ನಾಯಿ ಅಡ್ಡ ಬಂದು ಉರುಳಿ ಬಿದ್ದ ಅಟೋ ರಿಕ್ಷಾ, ಓರ್ವ ಪ್ರಯಾಣಿಕ ಆಸ್ಪತ್ರೆಗೆ - Karavali Times

728x90

24 February 2024

ತೆಂಕಕಜೆಕಾರು : ನಾಯಿ ಅಡ್ಡ ಬಂದು ಉರುಳಿ ಬಿದ್ದ ಅಟೋ ರಿಕ್ಷಾ, ಓರ್ವ ಪ್ರಯಾಣಿಕ ಆಸ್ಪತ್ರೆಗೆ

ಬಂಟ್ವಾಳ, ಫೆಬ್ರವರಿ 24, 2024 (ಕರಾವಳಿ ಟೈಮ್ಸ್) : ನಾಯಿ ಅಡ್ಡ ಬಂದು ಅಟೋ ರಿಕ್ಷಾ ಉರುಳಿ ಬಿದ್ದು ವ್ಯಕ್ತಿಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತೆಂಕಕಜೆಕಾರು ಗ್ರಾಮದ ಕರ್ಲ ಎಂಬಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. 

ಗಾಯಾಳು ಅಟೋ ಪ್ರಯಾಣಿಕನನ್ನು ಬೆಳ್ತಂಗಡಿ ತಾಲೂಕು, ಕನ್ಯಾಡಿ ಗ್ರಾಮದ ನಿವಾಸಿ ಗುಮ್ಮಣ್ಣ ನಾಯ್ಕ (70) ಎಂದು ಹೆಸರಿಸಲಾಗಿದೆ. ಗುಮ್ಮಣ್ಣ ನಾಯ್ಕ ಅವರು ಶುಕ್ರವಾರ ರಾತ್ರಿ ವೇಳೆ ಜಿನೇಂದ್ರ ಕುಮಾರ್ ಎಂಬವರ ಅಟೋ ರಿಕ್ಷಾದಲ್ಲಿ ಸಂತೋಷ, ಜಲಜಾಕ್ಷಿ ಹಾಗೂ ಜಯಶ್ರೀ ಎಂಬ ಇತರ ಪ್ರಯಾಣಿಕರ ಜೊತೆ ಪ್ರಯಾಣಿಸುತ್ತಿದ್ದ ವೇಳೆ ಕರ್ಲ ಎಂಬಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಅಟೋ ರಿಕ್ಷಾ ಚಾಲಕನ ನಿಯಂತ್ರಣ ಮೀರಿ ರಸ್ತೆಗೆ ಉರುಳಿ ಬಿದ್ದಿದೆ. 

ಅಪಘಾತದಿಂದಾಗಿ ಗುಮ್ಮಣ್ಣ ನಾಯ್ಕ ಅವರು ಗಾಯಗೊಂಡಿದ್ದು, ಇತರ ಪ್ರಯಾಣಿಕರು ಹಾಗೂ ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಗಾಯಾಳು ಗುಮ್ಮಣ್ಣ ಅವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ತೆಂಕಕಜೆಕಾರು : ನಾಯಿ ಅಡ್ಡ ಬಂದು ಉರುಳಿ ಬಿದ್ದ ಅಟೋ ರಿಕ್ಷಾ, ಓರ್ವ ಪ್ರಯಾಣಿಕ ಆಸ್ಪತ್ರೆಗೆ Rating: 5 Reviewed By: karavali Times
Scroll to Top