ಬಂಟ್ವಾಳ, ಎಪ್ರಿಲ್ 21, 2025 (ಕರಾವಳಿ ಟೈಮ್ಸ್) : ಮನೆಯಂಗಳದಲ್ಲಿ ನಳ್ಳಿ ನೀರನ್ನು ಡ್ರಂಗೆ ತುಂಬಿಸುತ್ತಿದ್ದ ವೇಳೆ ಹಠಾತ್ ಆಗಿ ಕುಸಿದು ಬಿದ್ದು ಟೈಲರ್ ವೃತ್ತಿಯ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನರಿಕೊಂಬು ಗ್ರಾಮದಲ್ಲಿ ಭಾನುವಾರ ಅಪರಾಹ್ನ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ, ಬಿ ಸಿ ರೋಡು ಪದ್ಮಾ ಕಾಂಪ್ಲೆಕ್ಸಿನಲ್ಲಿ ಕಳೆದ 30 ವರ್ಷಗಳಿಂದ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ನಾಗೇಶ (56) ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಅವರ ಪತ್ನಿ ಶ್ರೀಮತಿ ಸುಂದರಿ (52) ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ನಾಗೇಶ ಅವರು ಭಾನುವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಪಂಚಾಯತಿ ನಳ್ಳಿಯಿಂದ ಬರುವ ನೀರನ್ನು ಪೈಪಿನಿಂದ ಫೈಬರ್ ಡ್ರಮ್‍ಗೆ ತುಂಬಿಸುತ್ತಿದ್ದವರು, ಒಮ್ಮೆಲೇ ಕುಸಿದು ಬಿದ್ದಿದ್ದು, ಕೆಳಕ್ಕೆ ಬೀಳುವ ಸಂದರ್ಭ ಫೈಬರ್ ಡ್ರಮ್ಮಿನ ಬದಿಯು ಮೂಗಿಗೆ ತಾಗಿ ನೋವುಂಟಾಗಿರುತ್ತದೆ. ಕುಸಿದು ಬಿದ್ದವರನ್ನು ಎಬ್ಬಿಸಿ ಉಪಚರಿಸಲಾಗಿ, ಬಾಯಿಯಲ್ಲಿ ನೊರೆ ಬರುತ್ತಿದ್ದು, ಉಸಿರಾಡಲು ಕಷ್ಟ ಪಡುತ್ತಿದ್ದರು. ತಕ್ಷಣ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment