ಬಂಟ್ವಾಳ, ಜೂನ್ 14, 2025 (ಕರಾವಳಿ ಟೈಮ್ಸ್) : ಮುಖ್ತಾರ್ ಮುಸ್ತಫಾ ನಂದಾವರ ಅವರ ಮಾಲಕತ್ವದ ಲೀಡ್ ಎಜ್ಯುಕೇಶನ್ ಇನ್ಸ್ಟಿಟಿಟ್ಯೂಶನಲ್ ಆಫ್ ಟ್ಯೂಟೇರಿಯಲ್ ಶೈಕ್ಷಣಿಕ ಸಂಸ್ಥೆಯು ಫರಂಗಿಪೇಟೆಯ ಪುದು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದ ಇಮಾದ್ ಸಂಕೀರ್ಣದಲ್ಲಿ ಆರಂಭಗೊಂಡಿದ್ದು, 2025-26ನೇ ಸಾಲಿನಲ್ಲಿ ವಿದ್ಯಾಭ್ಯಾಸ ಚಟುವಟಿಕೆಗಳು ಆರಂಭಗೊಂಡಿದೆ.
ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ನೇರವಾಗಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತರಗತಿಗಳಿಗೆ ನೋಂದಾಯಿಸಿಕೊಳ್ಳಬಹುದು. 1 ರಿಂದ 10ನೇ ತರಗತಿವರೆಗಿನ ಮಕ್ಕಳ ಸಹಿತ ಪಿಯುಸಿ ಹಾಗೂ ಪದವಿ ತರಗತಿ ವಿದ್ಯಾರ್ಥಿಗಳಿಗೂ ವಿಶೇಷ ಬೋಧನಾ ತರಗತಿ (ಟ್ಯೂಷನ್) ನಡೆಸಲಾಗುವುದು. ಶಿಕ್ಷಕ ತರಬೇತಿ (ಟೀಚರ್ಸ್ ಟ್ರೈನಿಂಗ್ಗ್) ಕೋರ್ಸುಗಳಾದ ನರ್ಸರಿ ಟೀಚರ್ಸ್ ಟ್ರೈನಿಂಗ್ಗ್ (ಎನ್.ಟಿ.ಟಿ.) ಹಾಗೂ ಪ್ರೈಮರಿ ಟೀಚರ್ಸ್ ಟ್ರೈನಿಂಗ್ಗ್ (ಪಿಟಿಟಿ) ಕೋರ್ಸುಗಳು ಹಾಗೂ ಕರೆಸ್ಪಾಂಡಿಂಗ್ ಡಿಗ್ರೀ, ಕಂಪ್ಯೂಟರ್ ಕೋರ್ಸ್ ಹಾಗೂ ಮೆಹಂದಿ ತರಬೇತಿ ಕೋರ್ಸುಗಳೂ ಲಭ್ಯವಿದೆ.
ಜೊತೆಗೆ ವಿದ್ಯಾರ್ಥಿಗಳಿಗೆ ಅಧ್ಯಯನ ಕೌಶಲ್ಯ, ಓದು ಹಾಗೂ ಬರವಣಿಗೆ ಕೌಶಲ್ಯ ಹಾಗೂ ಪ್ರತಿ ವಿದ್ಯಾರ್ಥಿಗೂ ವೈಯುಕ್ತಿಕ ಗಮನ ನೀಡಲಾಗುವುದು. ಈ ಬಗ್ಗೆ ವಿವರಗಳಿಗೆ ಮೊಬೈಲ್ ಸಂಖ್ಯೆ 8971765779, 9845432779 ಹಾಗೂ 9731567192ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
0 comments:
Post a Comment