ಬಂಟ್ವಾಳ, ಜೂನ್ 05, 2025 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮೇ 27 ರಂದು ಅಪರಾಹ್ನ ವೇಳೆ ನಡೆದ ಅಬ್ದುಲ್ ರಹಿಮಾನ್ ಎಂಬವರ ಕೊಲೆ ಹಾಗೂ ಜೊತೆಗಿದ್ದ ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ ಪೆÇಲೀಸರು ಶೃಂಗೇರಿ ಮೂಲದ ಆರೋಪಿಯೋರ್ವನನ್ನು ಬುಧವಾರ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಶೃಂಗೇರಿ ಬೆಟ್ಟಗೆರೆ ಗ್ರಾಮದ ನಿವಾಸಿ ರವಿ ಸಂಜಯ್ (29) ಎಂದು ಹೆಸರಿಸಲಾಗಿದೆ. ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಒಟ್ಟು ಸಂಖ್ಯೆ 8ಕ್ಕೇರಿದಂತಾಗಿದೆ.
ಈಗಾಗಲೇ ಪ್ರಕರಣದಲ್ಲಿ ಕುರಿಯಾಳ ಗ್ರಾಮದ ಮುಂಡರಕೋಡಿ ನಿವಾಸಿ ದಿವಂಗತ ಯೋಗೀಶ್ ಪೂಜಾರಿ ಎಂಬವರ ಪುತ್ರ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರ-ಭದ್ರಕಾಳಿ ದೇವಸ್ಥಾನ ಹತ್ತಿರದ ನಿವಾಸಿ ಪ್ರಮೋದ್ ರಾಜ್ ಜೋಗಿ ಅವರ ಪುತ್ರ ಪ್ರøಥ್ವಿರಾಜ್ (21) ಹಾಗೂ ಅಮ್ಮುಂಜೆ ಗ್ರಾಮದ ಶಿವಾಜಿನಗರ ನಿವಾಸಿ ಸುರೇಶ್ ಬೆಳ್ಚಡ ಅವರ ಪುತ್ರ ಚಿಂತನ್ (19), ತೆಂಕಬೆಳ್ಳೂರು ಗ್ರಾಮದ ನಿವಾಸಿ ಸುಮಿತ್ ಆಚಾರ್ಯ (27) ಹಾಗೂ ಬಡಗಬೆಳ್ಳೂರು ಗ್ರಾಮದ ನಿವಾಸಿ ರವಿರಾಜ್ (23), ತೆಂಕಬೆಳ್ಳೂರು ಗ್ರಾಮದ ನಿವಾಸಿ ಅಭಿನ್ ರೈ (32) ಹಾಗೂ ಬಡಗಬೆಳ್ಳೂರು ಗ್ರಾಮದ ತೇಜಾಕ್ಷ (24) ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
0 comments:
Post a Comment