ಬಂಟ್ವಾಳ, ಜೂನ್ 16, 2025 (ಕರಾವಳಿ ಟೈಮ್ಸ್) : ಭಾರೀ ಮಳೆ ಹಾಗೂ ಮಳೆ ಅನಾಹುತಗಳ ಮಧ್ಯೆ ಕನ್ಯಾನ ಗ್ರಾಮದ ಮಂಡ್ಯೂರು ಪ್ರದೇಶದ ಕೆಲ ಮನೆಗಳಲ್ಲಿ ನಿಗೂಢ ಶಬ್ದ ಕೇಳಿ ಬಂದ ಘಟನೆ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಇಲ್ಲಿನ ಎರಡು-ಮೂರು ಮನೆಗಳಿಗೆ ಈ ನಿಗೂಢ ಹಾಗೂ ಅಚಾನಕ್ ಶಬ್ದ ಕೇಳಿ ಬಂದಿದ್ದು, ತೀವ್ರ ಆತಂಕಗೊಂಡ ಸ್ಥಳೀಯರು ದೂರು ನೀಡಿದ ಮೇರೆಗೆ ಸ್ಥಳಕ್ಕೆ ಪಂಚಾಯತ್ ಸಿಬ್ಬಂದಿಗಳು ಗ್ರಾ ಪಂ ಸದಸ್ಯರ ಜೊತೆ ಸೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಬ್ದ ಕೇಳಿದ ಮನೆಗಳಲ್ಲಿ ಯಾವುದೇ ಬಿರುಕು ಬಿಟ್ಟ ರೀತಿಯ ಘಟನೆಗಳು ಕಂಡು ಬಂದಿರುವುದಿಲ್ಲ. ನಿಗೂಢ ಶಬ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂಬುದಾಗಿ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ ಎಂದು ತಹಶೀಲ್ದಾರ್ ಅರ್ಚನಾ ಭಟ್ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ್ದಾರೆ.
16 June 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment