ಬಂಟ್ವಾಳ, ಫೆಬ್ರವರಿ 17, 2026 (ಕರಾವಳಿ ಟೈಮ್ಸ್) : ನಿಲ್ಲಿಸಿದ್ದ ಲಾರಿಯ ಬ್ಯಾಟರಿ ಕಳವುಗೈದ ಘಟನೆ ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಫೆಬ್ರವರಿ 16 ರಂದು ಬೆಳಕಿಗೆ ಬಂದಿದೆ.
ಕಾಶಿಮಠ-ಕಬ್ಬಿನಹಿತ್ತಿಲು ನಿವಾಸಿ ವಿನೋದ್ ಕುಮಾರ್ ಅವರಿಗೆ ಸೇರಿದ ಲಾರಿಯ ಬ್ಯಾಟರಿ ಕಳವಾಗಿದೆ. ಇವರು ತನ್ನ ಲಾರಿಯನ್ನು ಫೆ 14 ರಂದು ರಾತ್ರಿ 7 ಗಂಟೆಗೆ ಕಾಶಿಮಠ ಯುವಕ ಮಂಡಲದ ಮುಂಭಾಗದಲ್ಲಿ ನಿಲ್ಲಿಸಿ ಮನೆಗೆ ತೆರಳಿದ್ದರು. ಫೆ 15 ಭಾನುವಾರ ಲಾರಿ ಬಳಿ ಬರದೆ ಇದ್ದು, ಫೆ 16 ರಂದು ಸೋಮವಾರ ಬೆಳಿಗ್ಗೆ 8 ಗಂಟೆಗೆ ಲಾರಿ ಬಳಿ ಬಂದಾಗ ಲಾರಿಯ ಬ್ಯಾಟರಿ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಬ್ಯಾಟರಿಯ ಮೌಲ್ಯ 10 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment