ಬಂಟ್ವಾಳ, ಫೆಬ್ರವರಿ 17, 2026 (ಕರಾವಳಿ ಟೈಮ್ಸ್) : ತೋಡಿನಿಂದ ಮರಳು ಕಳ್ಳತನ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ಮಚ್ಚಿನ ಗ್ರಾಮದ ಪುಂಚಪಾದೆ ಬಳಿಯ ಪೆರೂರು ಎಂಬಲ್ಲಿ ಫೆ 16 ರಂದು ನಡೆದಿದೆ.
ಬಂಧಿತ ಆರೋಪಿಗಳನ್ನು ಪ್ರವೀಣ್ (38), ವಸಂತ (42) ಹಾಗೂ ದಿನೇಶ (48) ಎಂದು ಹೆಸರಿಸಲಾಗಿದೆ. ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ರಾಜೇಶ್ ಕೆ ವಿ ನೇತೃತ್ವದ ಪೊಲೀಸರು ಕಾರಿಂಜೇಶ್ವರ ದೇವಸ್ಥಾನದ ಮಹತೋಭಾರ ಜಾತ್ರಾ ಬಂದೋಬಸ್ತು ಕರ್ತವ್ಯದ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಪುಂಚಪಾದೆ ಬಳಿಯ ಪೆರೂರು ಎಂಬಲ್ಲಿ ಪೆರೂರು ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಹರಿಯುವ ನೀರಿನ ತೋಡಿನಿಂದ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಕಳ್ಳತನ ಮಾಡಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.
ಆರೋಪಿಗಳಿಂದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಪಿಕಪ್ ವಾಹನ, ಸುಮಾರು 6 ಸಾವಿರ ರೂಪಾಯಿ ಮೌಲ್ಯದ 50 ಬುಟ್ಟಿಯಷ್ಟು ಮರಳು ಹಾಗೂ ಸುಮಾರು 1 ಸಾವಿರ ರೂಪಾಯಿ ಮೌಲ್ಯದ ಇತರ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment