ಬಂಟ್ವಾಳ, ಎಪ್ರಿಲ್ 21, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಇದರ ಸಹಯೋಗದೊಂದಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನವು ಮೇ 12 ರಂದು ಪಾಣೆಮಂಗಳೂರು ಸಮೀಪದ ಆಲಡ್ಕ ಎಸ್ ಎಸ್ ಹಾಲ್ ನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಪೂರ್ವಭಾವಿ ಸಭೆಯು ಬಿ ಸಿ ರೋಡಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು ಎಚ್ ಸಮ್ಮೇಳನದ ರೂಪುರೇಷೆ ಹಾಗೂ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತನಾಡಿ, ಬ್ಯಾರಿ ಆಂದೋಲನ, ಅಕಾಡೆಮಿಗಾಗಿ ಶ್ರಮಿಸಿದ ನಾಯಕರು ಹಾಗೂ ಬಂಟ್ವಾಳ ತಾಲೂಕಿನ ನೇರಳಕಟ್ಟೆಯಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ನೆನಪಿಸಿಕೊಂಡರಲ್ಲದೆ ಮುಂದೆ ನಡೆಯುವ ಬ್ಯಾರಿ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.
ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಸಂಚಾಲಕ ಪಿ ಎ ರಹೀಂ, ಕೋಶಾಧಿಕಾರಿ ಮುಹಮ್ಮದ್ ಸಾಗರ್, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ ಎಂ ಅಶ್ರಫ್ ಪಾಣೆಮಂಗಳೂರು, ಕೋಶಾಧಿಕಾರಿ ಹಂಝ ಬಸ್ತಿಕೋಡಿ ಮೊದಲಾದವರು ಭಾಗವಹಿಸಿದ್ದರು.
ಬ್ಯಾರಿ ಪ್ರಮುಖರಾದ ಯೂಸುಫ್ ಕರಂದಾಡಿ, ಮೂನಿಷ್ ಅಲಿ ಬಂಟ್ವಾಳ, ಹನೀಫ್ ಬಗ್ಗುಮೂಲೆ, ಅಬ್ದುಲ್ ಮಜೀದ್ ಕಡೆಗೋಳಿ, ಮಹಮ್ಮದ್ ನಂದಾವರ, ಇಬ್ರಾಹಿಂ ಕೈಲಾರ್, ಪಿ ಮಹಮ್ಮದ್ ಪಾಣೆಮಂಗಳೂರು, ಉಮರ್ ಮಂಚಿ, ಅಲ್ತಾಫ್ ಡೈಮಂಡ್, ಮುಹಮ್ಮದ್ ಸುರಿಬೈಲು, ಯು ಮುಸ್ತಫಾ ಆಲಡ್ಕ, ಹನೀಫ್ ನಂದರಬೆಟ್ಟು, ಖಲೀಲ್ ಚಿಕ್, ಅಬೂಬಕ್ಕರ್ ಅಮ್ಮುಂಜೆ ಮೊದಲಾದವರು ವಿವಿಧ ಸಲಹೆ ನೀಡಿದರು.
ಬ್ಯಾರಿ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ ವಂದಿಸಿದರು.





















0 comments:
Post a Comment