ಕೈಕುಂಜೆ ಅಂಗನವಾಡಿಗೆ ಹೈಟೆಕ್ ಸ್ಪರ್ಶ : 20 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣ - Karavali Times ಕೈಕುಂಜೆ ಅಂಗನವಾಡಿಗೆ ಹೈಟೆಕ್ ಸ್ಪರ್ಶ : 20 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣ - Karavali Times

728x90

7 April 2026

ಕೈಕುಂಜೆ ಅಂಗನವಾಡಿಗೆ ಹೈಟೆಕ್ ಸ್ಪರ್ಶ : 20 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣ

ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಕೈಕುಂಜೆ ಅಂಗನವಾಡಿ ಕೇಂದ್ರವನ್ನು ಸುಸಜ್ಜಿತವಾಗಿ ಪುನರ್ ನಿರ್ಮಿಸುವ ಕಾಮಗಾರಿ ಭರದಿಂದ ಸಾಗುತ್ತಿದ್ದು, ನಿರ್ಮಾಣ ಮುಕ್ತಾಯದ ಹಂತಕ್ಕೆ ತಲುಪಿದೆ. ಬಂಟ್ವಾಳ ಶಾಸಕ ಯು ರಾಜೇಶ್ ಅವರ ಮುತುವರ್ಜಿಯಿಂದ ಶಾಸಕರ ನಿಧಿ ಹಾಗೂ ಸಿಎಸ್‍ಆರ್ ನಿಧಿ ಒಳಗೊಂಡು ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೊಂದು ತಿಂಗಳ ಒಳಗೆ ನೂತನ ಅಂಗನವಾಡಿ ಕಟ್ಟಡ ಸುಸಜ್ಜಿತವಾಗಿ ತಲೆ ಎತ್ತಿ ನಿಲ್ಲಲಿದೆ. ಸುಸಜ್ಜಿತ ಶೌಚಾಲಯ ಸಹಿತ ಪುಟಾಣಿಗಳಿಗೆ ಬೇಕಾಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ಈ ಅಂಗನವಾಡಿ ಕೇಂದ್ರ ಬಿ ಸಿ ರೋಡು ನಗರದಲ್ಲಿ ಎದ್ದು ಕಾಣಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೈಕುಂಜೆ ಅಂಗನವಾಡಿಗೆ ಹೈಟೆಕ್ ಸ್ಪರ್ಶ : 20 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣ Rating: 5 Reviewed By: karavali Times
Scroll to Top