ವಾಹನಗಳ ಪಾರ್ಕಿಂಗಿಗೆ ಸಮರ್ಪಕ ವ್ಯವಸ್ಥೆ ಮಾಡದೆ ಟ್ರಾಫಿಕ್ ಜಾಂಗೆ ಕಾರಣ : 2 ಮದುವೆ ಹಾಲ್ ವಿರುದ್ದ ಬಜ್ಪೆ ಪೊಲೀಸರಿಂದ ಸುಮೋಟೋ ಕೇಸ್ ದಾಖಲು - Karavali Times ವಾಹನಗಳ ಪಾರ್ಕಿಂಗಿಗೆ ಸಮರ್ಪಕ ವ್ಯವಸ್ಥೆ ಮಾಡದೆ ಟ್ರಾಫಿಕ್ ಜಾಂಗೆ ಕಾರಣ : 2 ಮದುವೆ ಹಾಲ್ ವಿರುದ್ದ ಬಜ್ಪೆ ಪೊಲೀಸರಿಂದ ಸುಮೋಟೋ ಕೇಸ್ ದಾಖಲು - Karavali Times

728x90

12 April 2026

ವಾಹನಗಳ ಪಾರ್ಕಿಂಗಿಗೆ ಸಮರ್ಪಕ ವ್ಯವಸ್ಥೆ ಮಾಡದೆ ಟ್ರಾಫಿಕ್ ಜಾಂಗೆ ಕಾರಣ : 2 ಮದುವೆ ಹಾಲ್ ವಿರುದ್ದ ಬಜ್ಪೆ ಪೊಲೀಸರಿಂದ ಸುಮೋಟೋ ಕೇಸ್ ದಾಖಲು

ಮಂಗಳೂರು, ಎಪ್ರಿಲ್ 12, 2026 (ಕರಾವಳಿ ಟೈಮ್ಸ್) : ಮದುವೆ ಕಾರ್ಯಕ್ರಮದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮಾಡದೆ ಟ್ರಾಫಿಕ್ ಜಾಂಗೆ ಕಾರಣವಾದ ಎರಡು ಮದುವೆ ಹಾಲ್ ಗಳ ವಿರುದ್ದ ಎಪ್ರಿಲ್ 12 ರಂದು ಬಜ್ಪೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ರಾಯಲ್ ಪ್ಯಾಲೇಸ್ ಹಾಗೂ ಒಂಡೆಲಾ ಹಾಲ್ ಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಪ್ರಿಲ್ 12 ರಂದು ಮದ್ಯಾಹ್ನ 12 ಗಂಟೆಯಿಂದ 2 ಗಂಟೆಯ ಮಧ್ಯೆ ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ರಾಯಲ್ ಪ್ಯಾಲೇಸ್ ಹಾಗೂ ಒಂಡೆಲಾ ಹಾಲ್ ಮಾಲಿಕರು ಮದುವೆಗೆ ಕಾರ್ಯಕ್ರಮಕ್ಕೆ ಬಂದ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ ಮದುವೆ ಕಾರ್ಯಕ್ರಮಕ್ಕೆ ಹಾಲ್ ಬಾಡಿಗೆ ನೀಡಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿಸಿ ಟ್ರಾಫಿಕ್ ಜ್ಯಾಂ ಆಗಲು ಕಾರಣಕರ್ತರಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಕ್ರಮವಾಗಿ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆ ಮತ್ತು ಅಪಾಯವನ್ನುಂಟು ಮಾಡಿರುವ  ಬಗ್ಗೆ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್  ಮಾಲಿಕರ ಮತ್ತು ಆಯೋಜಕರ ಮೇಲೆ ಬಜಪೆ ಪೆÇಲೀಸರು ಮೊಕದ್ದಮೆ ಸಂಖ್ಯೆ 73/2026 ಕಲಂ 126(2), 285, 292 ಬಿ ಎನ್ ಎಸ್, ಕಲಂ 122 ಐಎಂವಿ ಆಕ್ಟ್ ಪ್ರಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಾಹನಗಳ ಪಾರ್ಕಿಂಗಿಗೆ ಸಮರ್ಪಕ ವ್ಯವಸ್ಥೆ ಮಾಡದೆ ಟ್ರಾಫಿಕ್ ಜಾಂಗೆ ಕಾರಣ : 2 ಮದುವೆ ಹಾಲ್ ವಿರುದ್ದ ಬಜ್ಪೆ ಪೊಲೀಸರಿಂದ ಸುಮೋಟೋ ಕೇಸ್ ದಾಖಲು Rating: 5 Reviewed By: karavali Times
Scroll to Top