ಇಲೆಕ್ಟ್ರಿಕ್ ಅಟೋ ಪರವಾನಿಗೆಗೆ ಅರ್ಜಿ ಸಲ್ಲಿಸಲು ಬಾಕಿ ಇರುವವರು ತಕ್ಷಣ ಅರ್ಜಿ ಸಲ್ಲಿಸಲು ಆರ್.ಟಿ.ಒ. ಸೂಚನೆ - Karavali Times ಇಲೆಕ್ಟ್ರಿಕ್ ಅಟೋ ಪರವಾನಿಗೆಗೆ ಅರ್ಜಿ ಸಲ್ಲಿಸಲು ಬಾಕಿ ಇರುವವರು ತಕ್ಷಣ ಅರ್ಜಿ ಸಲ್ಲಿಸಲು ಆರ್.ಟಿ.ಒ. ಸೂಚನೆ - Karavali Times

728x90

13 May 2026

ಇಲೆಕ್ಟ್ರಿಕ್ ಅಟೋ ಪರವಾನಿಗೆಗೆ ಅರ್ಜಿ ಸಲ್ಲಿಸಲು ಬಾಕಿ ಇರುವವರು ತಕ್ಷಣ ಅರ್ಜಿ ಸಲ್ಲಿಸಲು ಆರ್.ಟಿ.ಒ. ಸೂಚನೆ

ಮಂಗಳೂರು, ಮೇ 14, 2026 (ಕರಾವಳಿ ಟೈಮ್ಸ್) : ಮಂಗಳೂರು ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ (ಕೆಎ-19) ನೋಂದಣಿಗೊಂಡಿರುವ ಎಲ್ಲಾ ಇಲೆಕ್ಟ್ರಿಕ್ ಆಟೋ ರಿಕ್ಷಾಗಳ ಸಂಖ್ಯೆ 3551 ಇದ್ದು, ಅದರಲ್ಲಿ 2162 ಇ-ಆಟೋ ರಿಕ್ಷಾ ಪರವಾನಿಗೆಗಾಗಿ ಅರ್ಜಿಗಳು ಈ ಕಛೇರಿಗೆ ಬಂದಿವೆ. ಇನ್ನು 1389 ಅರ್ಜಿಗಳನ್ನು ಈ ಕಛೇರಿಗೆ ಸಲ್ಲಿಸಿರುವುದಿಲ್ಲ. ಆದ್ದರಿಂದ ಈ ಕೂಡಲೇ ಬಾಕಿ ಉಳಿದಿರುವ 1389 ಇಲೆಕ್ಟ್ರಿಕ್ ಆಟೋ ರಿಕ್ಷಾ ಮಾಲಕರು ಪರವಾನಿಗೆಯನ್ನು ಪಡೆಯಲು ಅರ್ಜಿ ಸಲ್ಲಿಬೇಕು. ವಿಳಂಬ ಮಾಡಿದರೆ ಮೋಟಾರು ವಾಹನ ನಿಯಮಾವಳಿಗಳ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು  ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಇಲೆಕ್ಟ್ರಿಕ್ ಅಟೋ ಪರವಾನಿಗೆಗೆ ಅರ್ಜಿ ಸಲ್ಲಿಸಲು ಬಾಕಿ ಇರುವವರು ತಕ್ಷಣ ಅರ್ಜಿ ಸಲ್ಲಿಸಲು ಆರ್.ಟಿ.ಒ. ಸೂಚನೆ Rating: 5 Reviewed By: karavali Times
Scroll to Top