ಮೆಲ್ಕಾರ್ ಹಾಗೂ ಬಿ.ಸಿ.ರೋಡಿನಲ್ಲಿ ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಲಾವಣೆ ಪ್ರಕರಣ : ತಲಾ 25 ಸಾವಿರ ದಂಡ ವಿಧಿಸಿದ ನ್ಯಾಯಾಲಯ - Karavali Times ಮೆಲ್ಕಾರ್ ಹಾಗೂ ಬಿ.ಸಿ.ರೋಡಿನಲ್ಲಿ ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಲಾವಣೆ ಪ್ರಕರಣ : ತಲಾ 25 ಸಾವಿರ ದಂಡ ವಿಧಿಸಿದ ನ್ಯಾಯಾಲಯ - Karavali Times

728x90

18 May 2026

ಮೆಲ್ಕಾರ್ ಹಾಗೂ ಬಿ.ಸಿ.ರೋಡಿನಲ್ಲಿ ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಲಾವಣೆ ಪ್ರಕರಣ : ತಲಾ 25 ಸಾವಿರ ದಂಡ ವಿಧಿಸಿದ ನ್ಯಾಯಾಲಯ

ಬಂಟ್ವಾಳ, ಮೇ 18, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ 2 ಪ್ರತ್ಯೇಕ ಪ್ರಕರಣಗಳಲ್ಲಿ  ವಾಹನಗಳ ಮಾಲೀಕರಿಗೆ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. 

ಎಪ್ರಿಲ್ 6 ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರಿನಲ್ಲಿ ಕೆಎ19 ಎಚ್‍ಟಿ9694 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಹಾಗೂ ಎಪ್ರಿಲ್ 28 ರಂದಿ ಬಿ ಸಿ ರೋಡು ಬಳಿ ಕೆಎ05 ಕೆಜಿ6785 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಅಪ್ರಾಪ್ತ ಬಾಲಕರು ಚಾಲನೆ ಮಾಡಿರುವುದು ಬಂಟ್ವಾಳ ಸಂಚಾರ ಠಾಣಾ ಪೆÇಲೀಸರು ವಾಹನ ತಪಾಸಣೆಯ ವೇಳೆ ಪತ್ತೆ ಮಾಡಿದ್ದರು. 

ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ನೀಡಿದ ವಾಹನಗಳ ಮಾಲಿಕರ ವಿರುದ್ದ ಬಂಟ್ವಾಳ ಸಂಚಾರ ಠಾಣಾ ಪೆÇಲೀಸರು ಕಲಂ 199(ಎ) ಐಎಂವಿ ಆಕ್ಟ್ ಅಡಿಯಲ್ಲಿ ಎಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ದೋಷಾರೋಣ ಪತ್ರ ಸಲ್ಲಿಸಿದ್ದರು. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಮೇ 18 ರಂದು ಎರಡೂ ವಾಹನದ ಮಾಲಿಕರಿಗೆ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೆಲ್ಕಾರ್ ಹಾಗೂ ಬಿ.ಸಿ.ರೋಡಿನಲ್ಲಿ ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಲಾವಣೆ ಪ್ರಕರಣ : ತಲಾ 25 ಸಾವಿರ ದಂಡ ವಿಧಿಸಿದ ನ್ಯಾಯಾಲಯ Rating: 5 Reviewed By: karavali Times
Scroll to Top