ಬಂಟ್ವಾಳ, ಜೂನ್ 09, 2026 (ಕರಾವಳಿ ಟೈಮ್ಸ್) : ಕೋಡಪದವು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಾವೂರು-ಹರೇಕಳದ ಮಜೀದ್ ಫಾಮ್ರ್ಸ್ ವತಿಯಿಂದ ಸತತ ಎರಡನೇ ವರ್ಷ ಉಚಿತ ಬರವಣಿಗೆ ಪುಸ್ತಕ ವಿತರಿಸಲಾಯಿತು.
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ನಿರಂತರ ಸಹಕಾರ ನೀಡುತ್ತಿರುವ ಮಜೀದ್ ಫಾರ್ಮ್ಸ್ ಸಂಸ್ಥೆಯ ಸ್ಥಾಪಕಿ ಶ್ರೀಮತಿ ಮೈಮುನ ಅವರನ್ನು ಶಾಲೆ ಹಾಗೂ ಪೆÇೀಷಕರ ಪರವಾಗಿ ಸನ್ಮಾನಿಸಲಾಯಿತು.
ಜಿ ಪಂ ಮಾಜಿ ಉಪಾಧ್ಯಕ್ಷ ಎಂ ಎಸ್ ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಮೈಮುನ ಎಂ ಉದ್ಘಾಟಿಸಿದರು. ಈ ಸಂದರ್ಭ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಉಮ್ಮರ್ ಫಾರೂಕ್ ಟೆಕ್ನಿಕ್, ರಶೀದ್, ಡಾ ಮಹಮ್ಮದ್ ಗುತ್ತಿಗಾರು, ಡಾ ಗ್ಲಾಡಿಸ್ ಕೋಲಾಸೊ, ಶಾಲಾ ಮುಖ್ಯ ಶಿಕ್ಷಕ ವಿಠಲ ಜಿ, ಶಿಕ್ಷಕರಾದ ಆರತಿ, ಅನಿತಾ, ರಂಜಿನಿ, ಎಸ್ ಡಿ ಎಂ ಸಿ ಸದಸ್ಯರು, ಪೆÇೀಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಭಿಮಾನಿಗಳು ಭಾಗವಹಿಸಿದ್ದರು. ಶಿಕ್ಷಕರಾದ ರಕ್ಷಿತಾ ಸ್ವಾಗತಿಸಿ, ಚೆನ್ನಮ್ಮ ವಂದಿಸಿದರು. ಶ್ವೇತಾ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು,

















0 comments:
Post a Comment