ಕೋಟೆಕಾರು ಪಟ್ಟಣ ಪಂಚಾಯತಿನಲ್ಲಿ ನೀರಿನ ಬಿಲ್ ಪಾವತಿಗೆ ಇನ್ನು ಡಿಜಿಟಲ್ ವ್ಯವಸ್ಥೆ - Karavali Times ಕೋಟೆಕಾರು ಪಟ್ಟಣ ಪಂಚಾಯತಿನಲ್ಲಿ ನೀರಿನ ಬಿಲ್ ಪಾವತಿಗೆ ಇನ್ನು ಡಿಜಿಟಲ್ ವ್ಯವಸ್ಥೆ - Karavali Times

728x90

18 June 2026

ಕೋಟೆಕಾರು ಪಟ್ಟಣ ಪಂಚಾಯತಿನಲ್ಲಿ ನೀರಿನ ಬಿಲ್ ಪಾವತಿಗೆ ಇನ್ನು ಡಿಜಿಟಲ್ ವ್ಯವಸ್ಥೆ

ಉಳ್ಳಾಲ, ಜೂನ್ 18, 2026 (ಕರಾವಳಿ ಟೈಮ್ಸ್) : ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ಬಿಲ್ಲು ಪಾವತಿಯ ಸ್ಕ್ಯಾನರ್ ವ್ಯವಸ್ಥೆಯನ್ನು ಬಿಡುಗಡೆಗೊಳಿಸಲಾಯಿತು.  ಡಿಜಿಟಲ್ ಪಾವತಿ ವ್ಯವಸ್ಥೆಗೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ ಚಾಲನೆ ನೀಡಿದರು. 

ಈ ವ್ಯವಸ್ಥೆಯ ಮೂಲಕ ನಾಗರಿಕರು ತಮ್ಮ ನೀರಿನ ಬಿಲ್ಲನ್ನು ಸ್ಕ್ಯಾನ್ ಮಾಡಿ ಸುಲಭವಾಗಿ ಪಾವತಿಸಬಹುದು. ಇದರಿಂದ ಬಿಲ್ಲು ಪಾವತಿ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮತ್ತು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯತ್ ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರವೀಣ್ ಐ. ಬಗಂಬಿಲ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕೋಟೆಕಾರು ಪಟ್ಟಣ ಪಂಚಾಯತಿನಲ್ಲಿ ನೀರಿನ ಬಿಲ್ ಪಾವತಿಗೆ ಇನ್ನು ಡಿಜಿಟಲ್ ವ್ಯವಸ್ಥೆ Rating: 5 Reviewed By: karavali Times
Scroll to Top