ನಾವೂರು : ಅವರಿಗೆ ಅಳವಡಿಸಿದ್ದ ಸಾವಿರಾರು ರೂಪಾಯಿ ಮೌಲ್ಯದ 16 ಬ್ಯಾಟರಿ ಕಳವು - Karavali Times ನಾವೂರು : ಅವರಿಗೆ ಅಳವಡಿಸಿದ್ದ ಸಾವಿರಾರು ರೂಪಾಯಿ ಮೌಲ್ಯದ 16 ಬ್ಯಾಟರಿ ಕಳವು - Karavali Times

728x90

1 June 2026

ನಾವೂರು : ಅವರಿಗೆ ಅಳವಡಿಸಿದ್ದ ಸಾವಿರಾರು ರೂಪಾಯಿ ಮೌಲ್ಯದ 16 ಬ್ಯಾಟರಿ ಕಳವು

 ಬಂಟ್ವಾಳ, ಜೂನ್ 01, 2026 (ಕರಾವಳಿ ಟೈಮ್ಸ್) : ಸಂಸ್ಥೆಯೊಂದರ ಟವರಿಗೆ ಅಳವಡಿಸಿದ್ದ ಸಾವಿರಾರು ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ಕಳವುಗೈದ ಘಟನೆ ನಾವೂರು ಗ್ರಾಮದ ಪರ್ಲ ಎಂಬಲ್ಲಿ ಮೇ 31 ರಂದು ಬೆಳಕಿಗೆ ಬಂದಿದೆ. 

ಈ ಬಗ್ಗೆ ಸಂಸ್ಥೆಯ ಸೆಕ್ಯೂರಿಟಿ ಸುಪರ್ ವೈಸರ್, ಕಾವೂರು ನಿವಾಸಿ ದಿನೇಶ ಕೆ (51) ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ನಾವೂರು ಗ್ರಾಮದ ಪರ್ಲ ಎಂಬಲ್ಲಿ ನಿರ್ಮಿಸಲಾಗಿರುವ ಟವರಿಗೆ  ವಿದ್ಯುತ್ ಬದಲಿ ವ್ಯವಸ್ಥೆಗಾಗಿ 24 ಬ್ಯಾಟರಿಗಳನ್ನು ಅಳವಡಿಸಿದ್ದು, ಮೇ 31 ರಂದು ಬೆಳಿಗ್ಗೆ 1.30 ಗಂಟೆಯಿಂದ 5.30 ಗಂಟೆಯ ಮಧ್ಯೆ ನೆಟ್ ವರ್ಕ್ ಸಮಸ್ಯೆಯಾಗಿದ್ದು, 5.30 ಗಂಟೆಗೆ ಟವರ್ ಟೆಕ್ನಿಷಿಯನ್ ಗಣೇಶ್ ಭಟ್ ಅವರನ್ನು ಟವರ್ ಗೆ ಕಳಿಸಿ ಪರಿಶೀಲನೆ ನಡೆಸಿದಾಗ ಕಬ್ಬಿಣದ ಕಪಾಟಿನ ಬಾಗಿಲುಗಳು ತೆಗೆದ ಸ್ತಿತಿಯಲ್ಲಿದ್ದು, ಒಳಗೆ ನೋಡಿದಾಗ 24 ಬ್ಯಾಟರಿಗಳಲ್ಲಿ 16 ಬ್ಯಾಟರಿಗಳು ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಕಳವಾಗಿರುವ ಬ್ಯಾಟರಿಗಳ ಮೌಲ್ಯ 50 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನಾವೂರು : ಅವರಿಗೆ ಅಳವಡಿಸಿದ್ದ ಸಾವಿರಾರು ರೂಪಾಯಿ ಮೌಲ್ಯದ 16 ಬ್ಯಾಟರಿ ಕಳವು Rating: 5 Reviewed By: karavali Times
Scroll to Top