ನಾಲ್ಕೈದು ವರ್ಷಗಳಿಂದ ಬಂಟ್ವಾಳ ಪುರಸಭೆಯಲ್ಲಿ ಮೂಲೆ ಗುಂಪಾಗಿದ್ದ ಹಿಟಾಚಿ ಕೊನೆಗೂ ದುರಸ್ತಿ - Karavali Times ನಾಲ್ಕೈದು ವರ್ಷಗಳಿಂದ ಬಂಟ್ವಾಳ ಪುರಸಭೆಯಲ್ಲಿ ಮೂಲೆ ಗುಂಪಾಗಿದ್ದ ಹಿಟಾಚಿ ಕೊನೆಗೂ ದುರಸ್ತಿ - Karavali Times

728x90

31 July 2026

ನಾಲ್ಕೈದು ವರ್ಷಗಳಿಂದ ಬಂಟ್ವಾಳ ಪುರಸಭೆಯಲ್ಲಿ ಮೂಲೆ ಗುಂಪಾಗಿದ್ದ ಹಿಟಾಚಿ ಕೊನೆಗೂ ದುರಸ್ತಿ

ಬಂಟ್ವಾಳ, ಜುಲೈ 31, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೆಟ್ಟು ಹೋಗಿ ಮೂಲೆ ಗುಂಪಾಗಿದ್ದ ಹಿಟಾಚಿ ಯಂತ್ರವನ್ನು ಕೊನೆಗೂ ನೂತನ ಮುಖ್ಯಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ದುರಸ್ತಿಗೊಳಿಸಿ ಜುಲೈ 30 ರಂದು ಕಾರ್ಯಗತಗೊಳಿಸಿದ್ದಾರೆ.

ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಖರೀದಿಸಲಾಗಿದ್ದ ಹಿಟಾಚಿ ಯಂತ್ರವು ಕಳೆದ ಕೆಲವು ವರ್ಷಗಳಿಂದ ಕೆಟ್ಟು ಹೋಗಿ ಪುರಸಭಾ ಹಿಂಭಾಗದಲ್ಲಿ ಮೂಲೆಗೆ ಸೇರಿತ್ತು. ಜನಪ್ರತಿನಿಧಿಗಳ ಆಡಳಿತ ಇದ್ದಾಗ ಪ್ರತಿ ಸಾಮಾನ್ಯ ಸಭೆಗಳಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿತ್ತಾದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಯಂತ್ರ ದುರಸ್ತಿ ಕಾರ್ಯವೂ ಹಾಗೇ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಚಕಾರವೆತ್ತುವವರು ಯಾರೂ ಇಲ್ಲದಂತಾಗಿತ್ತು.

ಆದರೆ ಈ ಬಗ್ಗೆ ಕಾರ್ಯಪ್ರವೃತ್ತರಾದ ನೂತನ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ನುರಿತ ಮೆಕ್ಯಾನಿಕರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿ ಹಿಟಾಚಿ ಯಂತ್ರದ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಜುಲೈ 30 ರಂದು ಇಲ್ಲಿನ ಹಿಟಾಚಿ ಯಂತ್ರ ಮುಖ್ಯಾಧಿಕಾರಿ ಅವರ ಮುತುವರ್ಜಿ ಕಾರಣದಿಂದ ಕೇವಲ 10 ಸಾವಿರದ ಒಳಗಿನ ವೆಚ್ಚದಲ್ಲಿ ದುರಸ್ತಿ ಪಡಿಸಲಾಗಿದ್ದು, ಇದೀಗ ಪುರಸಭಾ ತ್ಯಾಜ್ಯ ಸಂಬಂಧಿ ಕಾಮಗಾರಿಗಳಿಗೆ ಅರ್ಪಣೆಯಾದಂತಾಗಿದೆ. ಮುಖ್ಯಾಧಿಕಾರಿ ಅವರ ಕಾರ್ಯವೈಖರಿಗೆ ಪುರವಾಸಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನಾಲ್ಕೈದು ವರ್ಷಗಳಿಂದ ಬಂಟ್ವಾಳ ಪುರಸಭೆಯಲ್ಲಿ ಮೂಲೆ ಗುಂಪಾಗಿದ್ದ ಹಿಟಾಚಿ ಕೊನೆಗೂ ದುರಸ್ತಿ Rating: 5 Reviewed By: karavali Times
Scroll to Top