ಸುಳ್ಯ, ಜುಲೈ 22, 2026 (ಕರಾವಳಿ ಟೈಮ್ಸ್) : ಸುಳ್ಯ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 18 ರಂದು ರಾತ್ರಿ ನಡೆದ ವಿವಾಹಿತೆಯ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಮಾವ, ಅತ್ತೆ ಹಾಗೂ ನಾದಿನಿಯನ್ನು ಪೊಲೀಸರು ಜುಲೈ 22 ರಂದು ಬಂಧಿಸಿದ್ದಾರೆ.
ಬಂಧಿತರನ್ನು ಮೃತ ಮಹಿಳೆಯ ಮಾವ ಸಿ ಪಿ ಅಳವಿ (54), ಅತ್ತೆ ಅಯಿಷಾ ಸಿ ಎ ಹಾಗೂ ನಾದಿನಿ ಫಸಿಲಾ ಸಿ ಎ (29) ಎಂದು ಹೆಸರಿಸಲಾಗಿದೆ. ಮೃತ ಫಾತಿಮತ್ ನಿಶಾನಾಳ ತಾಯಿ ಜುಬೈದ ಅವರು ಇದೊಂದು ಕೊಲೆ ಎಂದು ದೂರು ನೀಡಿದ್ದು, ದೂರಿನಲ್ಲಿ ಮಾವ, ಅತ್ತೆ ಹಾಗೂ ನಾದಿನಿಯನ್ನು ಆರೋಪಿಗಳು ಎಂದು ಹೆಸರಿಸಲಾಗಿದ್ದ ಹಿನ್ನಲೆಯಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಬಳಿಕ ನ್ಯಾಯಾಲಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.











0 comments:
Post a Comment