ಬಂಟ್ವಾಳ, ಆಗಸ್ಟ್ 14, 2026 (ಕರಾವಳಿ ಟೈಮ್ಸ್) : ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಆಟಿ ತಿಂಗಳ ವಿಶೇಷತೆಯನ್ನು ಸಾರುವ ಆಟಿದ ಕೂಟ ಕಾರ್ಯಕ್ರಮವು ಆಗಸ್ಟ್ 13 ರಂದು ಸಂಜೆ ಬಿ ಎ ಸೋಮಯಾಜಿ ಮೆಮೋರಿಯಲ್ ರೋಟರಿ ಸಭಾಂಗಣದಲ್ಲಿ ನಡೆಯಿತು.
ಕ್ಲಬ್ ಅಧ್ಯಕ್ಷ ರೋ ಹಂಝ ಬಸ್ತಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ಹಾಗೂ ರಂಗ ಕಲಾವಿದ ರೋ ರಾಜೇಶ್ ಆಚಾರ್ಯ ಅವರು ತುಳುನಾಡಿನ ಆಟಿ ತಿಂಗಳ ವೈಶಿಷ್ಟ್ಯ, ಅದರೊಂದಿಗೆ ಬೆಸೆದುಕೊಂಡಿರುವ ಸಂಪ್ರದಾಯಗಳು ಹಾಗೂ ಆಹಾರ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ಅಸಿಸ್ಟೆಂಟ್ ಗವರ್ನರ್ ರೋ ಶನ್ಫತ್ ಶರೀಫ್ ಹಾಗೂ ನಿಕಟಪೂರ್ವ ಅಧ್ಯಕ್ಷ ರೋ ವಚನ್ ಶೆಟ್ಟಿ ಅವರು ಆಟಿ ತಿಂಗಳ ಮಹತ್ವ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ರೊ ಹಂಝ ಬಸ್ತಿಕೋಡಿ ಸ್ವಾಗತಿಸಿ, ಕಾರ್ಯದರ್ಶಿ ರೊ ಮನೋಜ್ ಕನಪಾಡಿ ವಂದಿಸಿದರು. ರೊ ಲೋಕೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ರೊ ಸುಧಾಕರ್ ಸಾಲ್ಯಾನ್ ಅವರು ಮನರಂಜನಾ ಹಾಗೂ ಆಟೋಟ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಮನರಂಜನಾ ಹಾಗೂ ಆಟೋಟ ಸ್ಪರ್ಧೆಗಳು ನಡೆದಿದ್ದು, ವಿಜೇತರು ಸೇರಿದಂತೆ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ರೋಟರಿ ಸದಸ್ಯರು ಕುಟುಂಬ ಸಹಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸದಸ್ಯರು ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿ ತಂದಿದ್ದ ತುಳುನಾಡಿನ ವಿವಿಧ ಆಟಿ ಖಾದ್ಯಗಳಗಳನ್ನು ವಿತರಿಸಲಾಯಿತು.























0 comments:
Post a Comment