ಬೆಳ್ತಂಗಡಿ, ಆಗಸ್ಟ್ 3, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವನೆ ಮಾಡಿದ್ದ ವ್ಯಕ್ತಿಯನ್ನು ಬೆಳ್ತಂಗಡಿ ಪೊಲೀಸರು ಆಗಸ್ಟ್ 2 ರಂದು ಸಂಜೆ ಪೊಟ್ಟುಕೆರೆ ಎಂಬಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ನಿವಾಸಿ ಶ್ರೀರಾಜ್ ಶೆಟ್ಟಿ (36) ಎಂದು ಹೆಸರಿಸಲಾಗಿದೆ. ಬೆಳ್ತಂಗಡಿ ಪಿಎಸ್ಸೈ ಆನಂದ ಎಂ ಅವರು ಭಾನುವಾರ ಸಂಜೆ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಪೆÇಟ್ಟುಕೆರೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಮಲಿನಲ್ಲಿರುವುದು ಕಂಡು ಬಂದಿದೆ. ಈತನನ್ನು ವಿಚಾರಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಅತನನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಆತನ ವಿರುದ್ದ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.











0 comments:
Post a Comment