ಕಾಲೇಜಿನಲ್ಲಿ ಡ್ರಗ್ಸ್ ಪತ್ತೆ : ಮೂವರು ವಿದ್ಯಾರ್ಥಿಗಳ ವಿರುದ್ದ ಎನ್.ಡಿ.ಪಿಎಸ್. ಪ್ರಕರಣ ದಾಖಲು - Karavali Times ಕಾಲೇಜಿನಲ್ಲಿ ಡ್ರಗ್ಸ್ ಪತ್ತೆ : ಮೂವರು ವಿದ್ಯಾರ್ಥಿಗಳ ವಿರುದ್ದ ಎನ್.ಡಿ.ಪಿಎಸ್. ಪ್ರಕರಣ ದಾಖಲು - Karavali Times

728x90

5 August 2026

ಕಾಲೇಜಿನಲ್ಲಿ ಡ್ರಗ್ಸ್ ಪತ್ತೆ : ಮೂವರು ವಿದ್ಯಾರ್ಥಿಗಳ ವಿರುದ್ದ ಎನ್.ಡಿ.ಪಿಎಸ್. ಪ್ರಕರಣ ದಾಖಲು

ಮಂಗಳೂರು, ಆಗಸ್ಟ್ 05, 2026 (ಕರಾವಳಿ ಟೈಮ್ಸ್) : ಕಾಲೇಜು ಆಡಳಿತವು ನಡೆಸಿದ ತಪಾಸಣೆಯ ವೇಳೆ, ಹಲವು ಸಣ್ಣ ಪ್ಯಾಕೆಟ್‍ಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಸುಮಾರು 290 ಗ್ರಾಂ ಗಾಂಜಾ ಮೂವರು ವಿದ್ಯಾರ್ಥಿಗಳ ಬಳಿ ಪತ್ತೆಯಾಗಿದೆ.

ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ ಬಳಿಕ ಕಾಲೇಜು ತನ್ನ ನಿಗಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ, ನಿಯಮಿತ ಹಾಗೂ ಸಕ್ರಿಯ ತಪಾಸಣೆ ಆರಂಭಿಸಿತ್ತು. ಈ ವೇಳೆ ಮೂವರು ವಿದ್ಯಾರ್ಥಿಗಳ ಬಳಿ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಕಾಲೇಜು ಆಡಳಿತವು ತಕ್ಷಣವೇ ಸಂಬಂಧಪಟ್ಟ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಈ ಸಂಬಂಧ ಎನ್ ಡಿ ಪಿ ಎಸ್ ಕಾಯ್ದೆಯ ವಿವಿಧ ಕಲಂಗಳಡಿ ಎಫ್ ಐ ಆರ್ ದಾಖಲಿಸಲಾಗಿದೆ. ಗಾಂಜಾವನ್ನು ಕಾಲೇಜಿಗೆ ತಂದಿದ್ದಾನೆ ಎನ್ನಲಾದ ವಿದ್ಯಾರ್ಥಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿದ್ಯಾರ್ಥಿಯಾಗಿರುವುದು ಹಾಗೂ ಪ್ರಕರಣದಲ್ಲಿನ ಮಾದಕ ವಸ್ತುವಿನ ಪ್ರಮಾಣವನ್ನು ಪರಿಗಣಿಸಿದ ನ್ಯಾಯಾಲಯವು ಜಾಮೀನುದಾರರ ಭರವಸೆಯ ಮೇಲೆ ಆತನಿಗೆ ಜಾಮೀನು ಮಂಜೂರು ಮಾಡಿದೆ. ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸಿದ ಪೆಡ್ಲರ್ ಪತ್ತೆ ಹಾಗೂ ಬಂಧನಕ್ಕಾಗಿ ಪೆÇಲೀಸರು ತನಿಖೆ ಮುಂದುವರಿಸಿದ್ದಾರೆ.

ಪೊಲೀಸರ ಕಟ್ಟುನಿಟ್ಟಿನ ಕ್ರಮ ಹಾಗೂ ಜಾಗೃತಿ ಬಳಿಕ ಅನೇಕ ಕಾಲೇಜುಗಳು ಸ್ವಯಂಪ್ರೇರಿತವಾಗಿ ತಪಾಸಣೆಗಳನ್ನು ನಡೆಸುತ್ತಿದೆ. ಕಾಲೇಜುಗಳಲ್ಲಿ ರಚನೆಯಾಗಿರುವ ಮಾದಕ ವಸ್ತು ವಿರೋಧಿ ಸಮಿತಿಗಳು (ಆಂಟಿ ಡ್ರಗ್ ಕಮಿಟಿ-ಎಡಿಸಿ) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಕಾಲೇಜುಗಳೂ ಇದೇ ರೀತಿಯ ಬದ್ಧತೆಯನ್ನು ತೋರಿದರೆ, ಅತಿ ಕಡಿಮೆ ಅವಧಿಯಲ್ಲೇ ಸಂಪೂರ್ಣ ಮಾದಕ ವಸ್ತು ಮುಕ್ತ ಹಾಗೂ ಆರೋಗ್ಯಕರ ಕ್ಯಾಂಪಸ್ಸುಗಳನ್ನು ನಿರ್ಮಿಸಲು ಸಾಧ್ಯ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾಲೇಜಿನಲ್ಲಿ ಡ್ರಗ್ಸ್ ಪತ್ತೆ : ಮೂವರು ವಿದ್ಯಾರ್ಥಿಗಳ ವಿರುದ್ದ ಎನ್.ಡಿ.ಪಿಎಸ್. ಪ್ರಕರಣ ದಾಖಲು Rating: 5 Reviewed By: karavali Times
Scroll to Top