ಮಂಗಳೂರು, ಸೆಪ್ಟೆಂಬರ್ 25, 2026 (ಕರಾವಳಿ ಟೈಮ್ಸ್) : ಮಂಗಳೂರು ಪೂರ್ವ ಪೆÇೀಲೀಸ್ ಠಾಣೆ ವತಿಯಿಂದ ಕದ್ರಿ ಹಿಲ್ಸ್ ಸರ್ಕಾರಿ ಐ.ಟಿ.ಐ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಸೆ 25 ರಂದು ನಡೆಯಿತು.
ಪೊಲೀಸ್ ಠಾಣಾ ಪಿಎಸ್ಸೈ ಪ್ರತಿಭಾ ಮಾತನಾಡಿ, ಮಾದಕ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ದಿವ್ಯ ಸಂಕಲ್ಪ ಆಗಬೇಕು ಮತ್ತು ಸಮಾಜದಲ್ಲಿ ಇದರ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಸತೀಶ ಎ.ಎಸ್ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡುವ ವ್ಯಕ್ತಿಯು ಸ್ವ ಇಚ್ಚೆಯಿಂದ ನಿರ್ಧಾರ ಕೈಗೊಂಡು ವ್ಯಸನ ಮುಕ್ತನಾಗಬೇಕು ಎಂದರು.
ಡಬ್ಲ್ಯು.ಎಚ್.ಸಿ ಚಂದ್ರಲೇಖ, ಉಪ ಪ್ರಾಂಶುಪಾಲ ರಮೇಶ್ ನಾಯ್ಕ್ ಹಾಗೂ ಆಡಳಿತಾಧಿಕಾರಿ ಪ್ರತಿಮಾ ಎಂ, ಪ್ರಭಾರೆ ತರಬೇತಿ ಅಧಿಕಾರಿ ಅಲೆಕ್ಸಾಂಡರ್ ಸಿ ಜೆ, ಸ್ವರ್ಣ ಗೌರಿ, ರವಿ ಕೆ ಹಾಗೂ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಂದನ್, ಕಾರ್ಯದರ್ಶಿ ಶ್ರೀಜನ್, ಕ್ರೀಡಾ ಕಾರ್ಯದರ್ಶಿ ನೂತನ್, ಸಾಂಸ್ಕøತಿಕ ಕಾರ್ಯದರ್ಶಿ ಅಕ್ಷಯ್ ಮೊದಲಾದವರು ಭಾಗವಹಿಸಿದ್ದರು. ಕಿರಿಯ ತರಬೇತಿ ಅಧಿಕಾರಿ ಪುರುಷೋತ್ತವi ಎಲ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.














0 comments:
Post a Comment