ವಿಕಲ ಚೇತನರ ವಿವಿಧ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ : ಅಕ್ಟೋಬರ್ 30 ಕೊನೆ ದಿನ - Karavali Times ವಿಕಲ ಚೇತನರ ವಿವಿಧ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ : ಅಕ್ಟೋಬರ್ 30 ಕೊನೆ ದಿನ - Karavali Times

728x90

25 September 2026

ವಿಕಲ ಚೇತನರ ವಿವಿಧ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ : ಅಕ್ಟೋಬರ್ 30 ಕೊನೆ ದಿನ

ಮಂಗಳೂರು, ಸೆಪ್ಟೆಂಬರ್ 25, 2026 (ಕರಾವಳಿ ಟೈಮ್ಸ್) : 2026-27ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅನುಷ್ಠಾನಗೊಂಡಿರುವ 14 ಫಲಾನುಭವಿ ಆಧಾರಿತ ಯೋಜನೆಗಳಿಗೆ ಆನ್ ಲೈನ್ ಮೂಟಕ ಅರ್ಜಿ ಆಹ್ವಾನಿಸಲಾಗಿದೆ.

ಫಲಾನುಭವಿ ಆಧಾರಿತ ಯೋಜನೆಗಳು : 1. ಆಧಾರ್ ಯೋಜನೆ, 2. ಸಾಧನೆ ಯೋಜನೆ, 3. ವೈದ್ಯಕೀಯ ಪರಿಹಾರ ನಿಧಿ ಯೋಜನೆ, 4. ಪ್ರತಿಭಾವಂತ ವಿಕಲ ಚೇತನ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನ ಯೋಜನೆ, 5. ನಿರುದ್ಯೋಗ ಭತ್ಯೆ, 6. ಶಿಶುಪಾಲನಾ ಭತ್ಯೆ, 7. ಮರಣ ಪರಿಹಾರ ನಿಧಿ ಯೋಜನೆ, 8. ಪ್ರತಿಭೆ ಯೋಜನೆ, 9. ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ ಯೋಜನೆ, 10. ದೃಷ್ಟಿ ದೋಷ ಹೊಂದಿರುವ ವಿಕಲ ಚೇತನರಿಗೆ ಬ್ರೈಲ್ ಕಿಟ್ ಯೋಜನೆ, 11. ದೈಹಿಕ ವಿಕಲ ಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಯೋಜನೆ, 12. ಶ್ರವಣ ದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, 13. ಸಾಧನ ಸಲಕರಣೆಗಳ ಯೋಜನೆ, 14. ವಿಕಲ ಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಯೋಜನೆ.

ಅರ್ಜಿಗಳನ್ನು ಆನ್ ಲೈನ್ ಮೂಲಕ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು-ಒನ್ ಗಳಲ್ಲಿ ಸೇವಾ ಒನ್ ಪೆÇೀರ್ಟಲ್ ಸಲ್ಲಿಸಲು ಅಕ್ಟೋಬರ್ 30 ಕೊನೆ ದಿನವಾಗಿದೆ. 

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಕಲ ಚೇತನರ ಕಲ್ಯಾಣಾಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ 0824-2455999 ಅಥವಾ ಆಯಾ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ಮಂಗಳೂರು (ಮೊ : 9110897458, ಬಂಟ್ವಾಳ (ಮೊ 9164645616), ಪುತ್ತೂರು/ ಕಡಬ (9686682251), ಬೆಳ್ತಂಗಡಿ (7975199473), ಸುಳ್ಯ (8105300057) ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲ ಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ವಿಕಲ ಚೇತನರ ವಿವಿಧ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ : ಅಕ್ಟೋಬರ್ 30 ಕೊನೆ ದಿನ Rating: 5 Reviewed By: karavali Times
Scroll to Top