ಕರ್ನಾಟಕದಲ್ಲಿ ಮುಂಗಾರು ತೀವ್ರ ಕೊರತೆ ಹಿನ್ನಲೆ : ಮೋದ ಬಿತ್ತನೆಗೆ ಚಾಲನೆ - Karavali Times ಕರ್ನಾಟಕದಲ್ಲಿ ಮುಂಗಾರು ತೀವ್ರ ಕೊರತೆ ಹಿನ್ನಲೆ : ಮೋದ ಬಿತ್ತನೆಗೆ ಚಾಲನೆ - Karavali Times

728x90

4 September 2026

ಕರ್ನಾಟಕದಲ್ಲಿ ಮುಂಗಾರು ತೀವ್ರ ಕೊರತೆ ಹಿನ್ನಲೆ : ಮೋದ ಬಿತ್ತನೆಗೆ ಚಾಲನೆ

ಬೆಂಗಳೂರು, ಸೆಪ್ಟೆಂಬರ್ 04, 2026 (ಕರಾವಳಿ ಟೈಮ್ಸ್) : ಕರ್ನಾಟಕದಲ್ಲಿ ಮಳೆ ಕೊರತೆ ನೀಗಿಸಲು ಸೆಪ್ಟೆಂಬರ್ 4 ರಂದು ಅಧಿಕೃತವಾಗಿ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ.

ಯೋಜನೆಯ ಪ್ರಮುಖ ವಿವರಗಳು : ವೆಚ್ಚ: 28.52 ಕೋಟಿ ಅವಧಿ : 60 ದಿನಗಳು (ಸುಮಾರು 200 ಗಂಟೆಗಳ ಕಾರ್ಯಾಚರಣೆ) ಸಮಯ : ಪ್ರತಿದಿನ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಿಮಾನಗಳ ಮೂಲಕ ರಾಸಾಯನಿಕ ಸಿಂಪಡಣೆ.

ಮೋಡ ಬಿತ್ತನೆ ಎಂದರೇನು? : 

ವಾತಾವರಣದಲ್ಲಿರುವ ಮೋಡಗಳಲ್ಲಿನ ತೇವಾಂಶವು ಮಳೆಯಾಗಿ ಸುರಿಯುವಂತೆ ಮಾಡಲು, ಕೃತಕವಾಗಿ ರಾಸಾಯನಿಕಗಳನ್ನು ಸಿಂಪಡಿಸಿ ಮಳೆಯಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ವೈಜ್ಞಾನಿಕ ವಿಧಾನವೇ ಮೋಡ ಬಿತ್ತನೆ. ಮೋಡ ಬಿತ್ತನೆ ಎಂದರೆ ಕೃತಕವಾಗಿ ಮಳೆ ಬರಿಸಲು ಮೋಡಗಳ ಮೇಲೆ ನಿರ್ದಿಷ್ಟ ರಾಸಾಯ£ಕಗಳನ್ನು ವಿಮಾನದ ಮೂಲಕ ಸಿಂಪಡಿಸುವ ವೈಜ್ಞಾನಿಕ ವಿಧಾನವಾಗಿದೆ. 

ಮೋಡ ಬಿತ್ತನೆ ಪ್ರಕ್ರಿಯೆ ಹೇಗೆ? : 

ಮೋಡಗಳ ಗುರುತಿಸುವುದು : ರಾಡಾರ್ ಮತ್ತು ಉಪಗ್ರಹಗಳ ಸಹಾಯದಿಂದ ತೇವಾಂಶವಿರುವ ಸೂಕ್ತ ಮೋಡಗಳನ್ನು ಮೊದಲು ಗುರುತಿಸಲಾಗುತ್ತದೆ.

ರಾಸಾಯನಿಕಗಳ ಬಳಕೆ : ಸಿಲ್ವರ್ ಅಯೋಡೈಡ್, ಪೆÇಟ್ಯಾಸಿಯಮ್ ಅಯೋಡೈಡ್, ಒಣ ಮಂಜುಗಡ್ಡೆ (ಡ್ರೈ ಐಸ್) ಅಥವಾ ಸಾಮಾನ್ಯ ಉಪ್ಪನ್ನು (ಸೋಡಿಯಂ ಕ್ಲೋರೈಡ್) ಬಳಸಲಾಗುತ್ತದೆ.

ಸಿಂಪಡಣೆ : ವಿಶೇಷ ವಿಮಾನಗಳು ಅಥವಾ ನೆಲದ ಮೇಲಿನ ಜನರೇಟರ್‍ಗಳ ಮೂಲಕ ಈ ರಾಸಾಯನಿಕಗಳನ್ನು ಮೋಡಗಳ ಒಳಗೆ ಬಿಡಲಾಗುತ್ತದೆ.

ಮಳೆ ರಚನೆ : ರಾಸಾಯನಿಕ ಕಣಗಳು ಮೋಡದೊಳಗಿನ ಸಣ್ಣ ನೀರಿನ ಹನಿಗಳನ್ನು ಆಕರ್ಷಿಸಿ ಒಟ್ಟುಗೂಡಿಸುತ್ತವೆ. ಹನಿಗಳು ಭಾರವಾಗಿ ಮಂಜುಗಡ್ಡೆ ಅಥವಾ ಮಳೆಯ ಹನಿಗಳಾಗಿ ಪರಿವರ್ತನೆಗೊಂಡು ನೆಲಕ್ಕೆ ಬೀಳುತ್ತವೆ.

ಪ್ರಮುಖ ಮಿತಿಗಳು : ಈ ತಂತ್ರಜ್ಞಾನದಿಂದ ಮಳೆ ಬರಬೇಕಾದರೆ ಆಕಾಶದಲ್ಲಿ ಕಡ್ಡಾಯವಾಗಿ ತೇವಾಂಶವಿರುವ ಮೋಡಗಳು ಇರಬೇಕು. ಸಂಪೂರ್ಣ ಒಣ ಹವಾಮಾನ ಅಥವಾ ಮೋಡಗಳೇ ಇಲ್ಲದಾಗ ಇದನ್ನು ಮಾಡಲು ಸಾಧ್ಯವಿಲ್ಲ. ಇದು ಸಾಕಷ್ಟು ದುಬಾರಿ ಪ್ರಕ್ರಿಯೆಯಾಗಿದ್ದು, ಶೇಕಡಾ 100ರಷ್ಟು ಯಶಸ್ಸು ಸಿಗುತ್ತದೆ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ.

ಮೋಡ ಬಿತ್ತನೆ ಒಂದು ಹಂತದವರೆಗೆ ಪರಿಣಾಮಕಾರಿಯಾಗಿದೆ, ಆದರೆ ಇದು ಎಲ್ಲಾ ಪರಿಸ್ಥಿತಿಗಳಲ್ಲೂ ನೂರಕ್ಕೆ ನೂರು ಯಶಸ್ಸು ನೀಡುವುದಿಲ್ಲ. ಸಾಮಾನ್ಯವಾಗಿ, ಮೋಡ ಬಿತ್ತನೆಯಿಂದ ಮಳೆಯ ಪ್ರಮಾಣವನ್ನು ಶೇಕಡಾ 10 ರಿಂದ 30 ರಷ್ಟು ಹೆಚ್ಚಿಸಬಹುದು ಎಂದು ವಿವಿಧ ಸಂಶೋಧನೆಗಳು ತೋರಿಸಿವೆ. ತಜ್ಞರ ಪ್ರಕಾರ, ಮೋಡ ಬಿತ್ತನೆಯು ಬರಗಾಲಕ್ಕೆ ಸಂಪೂರ್ಣ ಪರ್ಯಾಯ ಪರಿಹಾರವಲ್ಲ. ಮೋಡ ಬಿತ್ತನೆಯು ಬರಗಾಲಕ್ಕೆ ಸಂಪೂರ್ಣ ಪರ್ಯಾಯ ಪರಿಹಾರವಲ್ಲ. ಆದರೆ ತುರ್ತು ಪರಿಸ್ಥಿತಿಯಲ್ಲಿ ಮಳೆಯ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಲು ಇರುವ ಒಂದು ಪೂರಕ ತಂತ್ರಜ್ಞಾನ ಮಾತ್ರವಾಗಿದೆ. 

ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ ತಿಂಗಳು ಪೂರ್ವದಿಂದ ತೇವಾಂಶದ ಮೋಡ ಬಂದರೆ 25-30% ಮಳೆ ಬರಬಹುದು. ಆದರೇ ಬಂದ ಮಳೆಯನ್ನು ನೈಸರ್ಗಿಕ ಮಳೆ ಅಥವಾ  ಮೋಡ ಬಿತ್ತನೆಯ ಮಳೆ ಎಂದು  ವಿಭಾಗ ಮಾಡಿ ನಿಖರವಾಗಿ ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಉತ್ತಮ ಹಿಂಗಾರು ಮಳೆ ಬೀಳಬಹುದು ಯೋಜನೆ ಯಶಸ್ವಿಯಾಗಲಿ ಅಂತ ಆಶಾವಾದಿಗಳಾಗೋಣ ...!!

  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕದಲ್ಲಿ ಮುಂಗಾರು ತೀವ್ರ ಕೊರತೆ ಹಿನ್ನಲೆ : ಮೋದ ಬಿತ್ತನೆಗೆ ಚಾಲನೆ Rating: 5 Reviewed By: karavali Times
Scroll to Top