ಮಂಗಳೂರು, ಸೆಪ್ಟೆಂಬರ್ 25, 2026 (ಕರಾವಳಿ ಟೈಮ್ಸ್) : ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆ ವತಿಯಿಂದ ಕರ್ನಾಟಕ ಪರ್ವ-2026 ಕಾರ್ಯಕ್ರಮ ಸೆ 26 ರಿಂದ 30ರವರೆಗೆ ಬೆಂಗಳೂರು-ಅರಮನೆ ಮೈದಾನದಲ್ಲಿ ಕರ್ನಾಟಕ ಪರ್ವ-2026 ನಡೆಯಲಿದೆ.
ಸೆಪ್ಟೆಂಬರ್ 26 ರಂದು ಕರ್ನಾಟಕ ಪರ್ವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಫರೀದ್ ಉದ್ಘಾಟಿಸಲಿದ್ದಾರೆ.
ಮೊದಲನೇ ದಿನ ಉದ್ಯಮ ಶೀಲತೆ, ತಂತ್ರಜ್ಞಾನ ಹಾಗೂ ವ್ಯಾಪಾರದಲ್ಲಿ ಎಐ ಬಳಕೆ ವಿಷಯದ ಕುರಿತು ವಿಚಾರ ಸಂಕೀರ್ಣ ಹಾಗೂ ಸಂಜೆ 7 ಗಂಟೆಯಿಂದ ಸ್ಯಾಂಡಲ್‍ವುಡ್ ಗಾಯಕ ವಿಜಯ್ ಪ್ರಕಾಶ್ ಇವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ 27 ರಂದು ಎಸ್.ಎಸ್.ಜಿಯಿಂದ ಉದ್ಯಮದವರೆಗೆ ವಿಚಾರ ಸಂಕೀರ್ಣ ಇರಲಿದ್ದು, ಸಂಜೆ 7 ಗಂಟೆಯಿಂದ ಕರ್ನಾಟಕದ ವಿವಿಧ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಅಜಯ್ ವಾರಿಯರ್ ಮತ್ತು ನಾದಿರಾ ಬಾನು ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ 28 ರಂದು ಸರ್ಕಾರಿ ಯೋಜನೆಗಳು, ಬ್ಯಾಂಕಿಂಗ್ ಮತ್ತು ಹಣಕಾಸು ಸೇರ್ಪಡೆ ವಿಚಾರಗೋಷ್ಠಿ, ಸಂಜೆ 7 ಗಂಟೆಗೆ ಕರ್ನಾಟಕದ ವಿವಿಧ ತಂಡಗಳಿಂದ ಸಾಂಸ್ಕøತಿಕ ವಿಷಯದ ಕುರಿತು ಕಾರ್ಯಕ್ರಮ ಮತ್ತು ಸೂಪಿ ಗಾಯಕ ಆದಿಲ್ ಹುಸೇನಿ ಹೈದರಾಬಾದ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ 29 ರಂದು ಕೌಶಲ್ಯದಿಂದ ಉದ್ಯಮದತ್ತ-ಸುಸ್ಥಿರ ಜೀವನೋಪಾಯ ಸೃಷ್ಟಿ ವಿಷಯದ ಕುರಿತು ವಿಚಾರಗೋಷ್ಠಿ, ಸಂಜೆ 7 ಗಂಟೆಗೆ ಕರ್ನಾಟಕದ ವಿವಿಧ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ವಾರ್ಸಿ ಸಹೋದರರಿಂದ ಕವ್ವಾಲಿ ಸಂಗೀತ ಕಾರ್ಯಕ್ರಮ.
ಸೆಪ್ಟೆಂಬರ್ 30 ರಂದು ಮಹಿಳಾ ಮತ್ತು ಯುವ ಸಬಲೀಕರಣ ವಿಷಯದ ಕುರಿತು ವಿಚಾರಗೋಷ್ಠಿ ಮತ್ತು ಸಂಜೆ 6 ಗಂಟೆಗೆ ಕರ್ನಾಟಕದ ವಿವಿಧ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಸಂಜೆ 7 ಗಂಟೆಗೆ ಮುಶಾಯಿರಾ ಇರುತ್ತದೆ.
ಕಾರ್ಯಕ್ರಮಕ್ಕೆ ಸಂದರ್ಶಕರಿಗೆ ಪ್ರದರ್ಶನ ವೀಕ್ಷಣೆಗೆ ಅಪರಾಹ್ನ 11 ಗಂಟೆಯಿಂದ ಅವಕಾಶವಿದ್ದು ಕರ್ನಾಟಕದ ಮೂಲೆ-ಮೂಲೆಗಳಿಂದ ವಿಶಿಷ್ಟ ವಸ್ತುಗಳು, ಕರಕುಶಲ ವಸ್ತುಗಳು ಮತ್ತು ಸ್ಥಳೀಯ ಉದ್ಯಮಗಳ ಸುಮಾರು 180ಕ್ಕೂ ಹೆಚ್ಚು ಮಳಿಗೆಗಳು ಕಾರ್ಯನಿರ್ವಹಿಸಲಿವೆ. ಅಲ್ಲದೇ ವಸ್ತು ಪ್ರದರ್ಶನ, ಆಹಾರ ಮೇಳ, ವಿಚಾರ ಸಂಕೀರ್ಣ, ಸಾಂಸ್ಕøತಿಕ ಕಾರ್ಯಕ್ರಮಗಳ ಸಮಾಗಮ ಇರಲಿದ್ದು ಪ್ರವೇಶ ಉಚಿತವಾಗಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















0 comments:
Post a Comment