ಮಂಗಳೂರು, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಸಮಾಜ ಸೇವಾ ಚಿಂತಕ ಗೆಳೆಯರ ಬಳಗ ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧೀಕೃತ ಜಲ ಪೂರಣ ಉಪಕರಣವನ್ನು ಕೊಡುಗೆಯಾಗಿ ನೀಡಲಾಯಿತು.
ಲೇಡಿಗೋಷನ್ ವೈದ್ಯಕೀಯ ಅಧೀಕ್ಷಕÀ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು ಮಾತನಾಡಿ, ಇಂತಹ ಕ್ರಿಯಾತ್ಮಕ ಚಿಂತನಾತ್ಮಕ ಶೈಲಿಯ ಕೊಡುಗೆಗಳು ಮಹಿಳೆಯರ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಮಹತ್ತರ ಪಾತ್ರವನ್ನು ವಹಿಸುವುದರಲ್ಲಿ ಸಂದೇಹ ಇಲ್ಲ. ಸೋಂಕು ರಹಿತ ಪರಿಶುದ್ಧ ನೀರು ಸದೃಢತೆ, ಸಬಲ ದೈಹಿಕ ಸಾಮಥ್ರ್ಯವನ್ನು ಮಹಿಳೆಗೆ ನೀಡಿ ಅವರÀಲ್ಲಿ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದರು.
ಆರೋಗ್ಯ ಸೇವೆಯನ್ನು ಅರಸಿ ಬರುವ ಪ್ರತಿಯೊಬ್ಬ ಫಲಾನುಭವಿ ಮಹಿಳೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡು ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಈ ಕೊಡುಗೆಯನ್ನು ನೀಡಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಮೀಮ್ ಕುಟ್ಟಿಕಳ ಹೇಳಿದರು.
ವೈದ್ಯಾಧಿಕಾರಿ ಡಾ. ಜಗದೀಶ್ ಅವರು ಶುಭ ಹಾರೈಸಿದರು. ಲೇಡಿಗೋಶನ್ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅಳವಡಿಸಲಾದ ಸುಮಾರು 80 ಲೀಟರ್ ಸಾಮಥ್ರ್ಯದ ತ್ರೀ ಇನ್ ಒನ್ ಶುದ್ಧೀಕೃತ ಜಲ ಮರುಪೂರಣ ಉಪಕರಣವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಸಮರ್ಪಿಸಲಾಯಿತು. ವಿನೂತನವಾಗಿ ಡಿಜಿಟಲ್ ಮಾದರಿಯಲ್ಲಿ ಉಪಕರಣವನ್ನು ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ವತಿಯಿಂದ ಅಧ್ಯಕ್ಷರು ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಹನೀಫ್ ಸಾಲೆತ್ತೂರು, ಶಕೀಲ್ ಹೈದರ್, ಹಬೀಬ್ ಉಳಾಯಿಬೆಟ್ಟು, ರಶೀದ್ ಗಡಿಯಾರ್ ಹಿರಿಯ ತಜ್ಞ ಡಾ. ದಯಾನಂದ್, ಸುಶ್ರೂಧೀಕ್ಷಕರಾದ ಗೀತಾ, ನರ್ಸಿಂಗ್ ಸುಪರ್ ವೈಸರ್ ಮಲ್ಲಿಕಾ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಸುಶ್ರೂಷಾಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.











0 comments:
Post a Comment