ಮಂಗಳೂರು, ಸೆಪ್ಟೆಂಬರ್ 25, 2026 (ಕರಾವಳಿ ಟೈಮ್ಸ್) : ಮಂಗಳೂರು ದಕ್ಷಿಣ ಪೆÇಲೀಸ್ ಠಾಣಾ ವ್ಯಾಪ್ತಿಯ ಪಾಂಡೇಶ್ವರ ಶ್ರೀನಿವಾಸ ಕಾಲೇಜಿನ ಕಿರಿಯ ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ಮತ್ತು ಹಲ್ಲೆ ಆರೋಪದಲ್ಲಿ 9 ವಿದ್ಯಾರ್ಥಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಸೆ 19ರಂದು ಮಧ್ಯಾಹ್ನ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಪಾಂಡೇಶ್ವರ ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜಿಸ್ಟಿಕ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ ಅಮೀರ್ ಅಲಿ ಎಂಬ ವಿದ್ಯಾರ್ಥಿ ತನ್ನ ಸ್ನೇಹಿತ ಮೊಹಮ್ಮದ್ ಅಲ್ಫಾಜ್ ಜೊತೆ ಕಾಲೇಜಿನ ಹೊರಗಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲೇಜಿನ ಆರೋಪಿ ಸೀನಿಯರ್ ವಿದ್ಯಾರ್ಥಿಗಳಾದ ನಸೀದ್ ಅಮೀರ್, ಆದಿಲ್ ಎಂ, ಅರ್ಶಕ್, ಅನೀಶ್, ಉವೈಸ್, ರೋಹನ್ ರನೇಶ್, ಆದಿಲ್ ವಿ ಪಿ, ರೆಹಾನ್ ಎಂ ಪಿ ಹಾಗೂ ಶಿನಾಸ್ ಎಂಬವರನ್ನೊಳಗೊಂಡ ಗುಂಪು ಬೈಕಿನಲ್ಲಿ ಬಲವಂತದಿಂದ ಎಳೆದೊಯ್ದು, ಚಡ್ಡಿಯಲ್ಲಿ ನಿಲ್ಲಿಸಿ ಒಂದು ಮನೆಯ ಕೊಠಡಿಯಲ್ಲಿ ಕೂಡಿ ಹಾಕಿ ಬೆಲ್ಟ್, ಹ್ಯಾಂಗರ್ ಹಾಗೂ ಕಬ್ಬಿಣದ ಪಂಚ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಕುಡಿಯಲು ನೀರು ಕೇಳಿದಾಗ ಆರೋಪಿಗಳು ಕಲುಷಿತ ನೀರು ನೀಡಿದ್ದು, ಅದನ್ನು ಕುಡಿಯಲು ನಿರಾಕರಿಸಿದಾಗ ಅದನ್ನು ಅವರ ಮೈಗೆ ಚೆಲ್ಲಿದ್ದಾರೆ. ಅಲ್ಲದೆ ಕೃತ್ಯವನ್ನು ವಿಡಿಯೋ ಚಿತ್ರೀಕರಣ ನಡೆಸಲಾಗಿದೆ ಹಾಗೂ ಈ ಬಗ್ಗೆ ಪೆÇಲೀಸರಿಗೆ ಅಥವಾ ಕಾಲೇಜಿಗೆ ಹೇಳಿದರೆ ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳು ಭಯದಿಂದ ಮನೆಗೆ ಹೋಗಿ ಕುಟುಂಬದವರ ಸಲಹೆಯಂತೆ ವಿಳಂಬವಾಗಿ ಈ ಬಗ್ಗೆ ಪೆÇಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಬಿ ಎನ್ ಎಸ್ 2023 ಕಲಂ 140(3), 127(2), 115(2), 118(1), 351(2), 109, 190 ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆ 1983 ಕಲಂ 116 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳ ಪೈಕಿ ಕೇರಳದ ಪಯ್ಯನ್ನೂರು-ಎಟ್ಟಿಕ್ಕುಳಂ ನಿವಾಸಿ, ರಫೀಕ್ ಅವರ ಪುತ್ರ, ಸುಭಾಶ್ ನಗರ ಶ್ರೀನಿವಾಸ್ ಕಾಲೇಜಿನ ದ್ವಿತೀಯ ವರ್ಷದ ಬಿಬಿಎ ಲಾಜಿಸ್ಟಿಕ್ ಕೋರ್ಸ್ ವಿದ್ಯಾರ್ಥಿಗಳಾದ ರಹಾನ್ ಎಂ ಪಿ ಬಿನ್ ರಫೀಕ್ (19), ಕಾಸರಗೋಡು, ತೃಕಾಪುರ ನಿವಾಸಿ ಬಶೀರುದ್ದೀನ್ ಅವರ ಪುತ್ರ, ಅದೇ ತರಗತಿಯ ಮೊಹಮ್ಮದ್ ಉವೈಸ್ (19), ಕೋಝಿಕ್ಕೋಡ್, ಅಕ್ಕಳ, ವಟ್ಟಪ್ಪೋಯಿಲ್ ನಿವಾಸಿ ಅಬ್ದುಲ್ಲ ಅವರ ಪುತ್ರ ಮೊಹಮ್ಮದ್ ಆದಿಲ್ ಯು ಪಿ (19), ಕಣ್ಣೂರು-ಪಯ್ಯನ್ನೂರು ನಿವಾಸಿ ರಮೇಶ್ ಖಾರ್ವಿ ಅವರ ಪುತ್ರ ರೋಹನ್ ರನೇಶ್ (19) ಹಾಗೂ ಕಣ್ಣೂರು-ಪೀಡಿಕಯಿಲ್, ನಲುಪ್ಪುರಪಾಟಿಲ್ ನಿವಾಸಿ ಅಮೀರ್ ಅವರ ಪುತ್ರ ನಶೀದ್ ಅಮೀರ್ (19) ಎಂಬ ಐವರನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.














0 comments:
Post a Comment