ಹೆದ್ದಾರಿಯಲ್ಲೇ ಯೂ ಟರ್ನ್ ಹೊಡೆಯುತ್ತಿದ್ದ ಕಾರಿಗೆ ಪಿಕಪ್ ಡಿಕ್ಕಿ : ಮಹಿಳೆ ಮೃತ್ಯು, ಐವರಿಗೆ ಗಾಯ - Karavali Times ಹೆದ್ದಾರಿಯಲ್ಲೇ ಯೂ ಟರ್ನ್ ಹೊಡೆಯುತ್ತಿದ್ದ ಕಾರಿಗೆ ಪಿಕಪ್ ಡಿಕ್ಕಿ : ಮಹಿಳೆ ಮೃತ್ಯು, ಐವರಿಗೆ ಗಾಯ - Karavali Times

728x90

28 September 2026

ಹೆದ್ದಾರಿಯಲ್ಲೇ ಯೂ ಟರ್ನ್ ಹೊಡೆಯುತ್ತಿದ್ದ ಕಾರಿಗೆ ಪಿಕಪ್ ಡಿಕ್ಕಿ : ಮಹಿಳೆ ಮೃತ್ಯು, ಐವರಿಗೆ ಗಾಯ

ಬಂಟ್ವಾಳ, ಸೆಪ್ಟೆಂಬರ್ 28, 2026 (ಕರಾವಳಿ ಟೈಮ್ಸ್) : ಮಾಣಿ ಗ್ರಾಮದ ಹಳೀರ ಎಂಬಲ್ಲಿ ಹೆದ್ದಾರಿಯಲ್ಲಿ ಯೂ ಟರ್ನ್ ಮಾಡಿದ ತಿರುಗಿಸುತ್ತಿದ್ದ ಕಾರಿಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು ಇತರ ಐವರು ಗಾಯಗೊಂಡ ಘಟನೆ ಸೆ 28 ರಂದು ಬೆಳಿಗ್ಗೆ ಸಂಭವಿಸಿದೆ. 

ಮೃತ ಮಹಿಳೆಯನ್ನು ಮಡಿಕೇರಿ ಮೂಲದ ನೆಬಿಸಾ (67) ಎಂದು ಹೆಸರಿಸಲಾಗಿದ್ದು, ಗಾಯಾಳುಗಳನ್ನು ಕಾರು ಚಾಲಕ ಅಕ್ಬರ್ ಅಲಿ, ಪ್ರಯಾಣಿಕರಾದ ಮೈಮೂನಾ, ಶಮಾ, ಜುಬೇದಾ ಹಾಗೂ ಪಿಕಪ್ ಚಾಲಕ ಪಳನಿ ಸ್ವಾಮಿ (25) ಎಂದು ಹೆಸರಿಸಲಾಗಿದೆ. 

ಈ ಬಗ್ಗೆ ಪಿಕಪ್ ಚಾಲಕ ತಮಿಳ್ನಾಡು ರಾಜ್ಯದ ಹೊಸೂರು ನಿವಾಸಿ ಪಳನಿಸ್ವಾಮಿ ಅವರು ಪೊಲೀಸರಿಗೆ ದೂರು ನೀಡಿದ್ದು, ಸೆ 28 ರಂದು ಬೆಳಿಗ್ಗೆ ಪಿಕಪ್ ಚಲಾಯಿಸುತ್ತಾ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಾ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಹಳಿರ ಎಂಬಲ್ಲಿಗೆ ತಲುಪಿದಾಗ, ಮುಂದಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಅದರ ಚಾಲಕ ಅಕ್ಬರ್ ಅಲಿ ದುಡುಕುತನದಿಂದ ಏಕಾಏಕಿ ಹೆದ್ದಾರಿಯಲ್ಲಿಯೇ ಯೂ ಟರ್ನ್ ಮಾಡಿ ಮಂಗಳೂರು ಕಡೆಗೆ ತಿರುಗಿಸಿದ ಪರಿಣಾಮ ಪಿಕಪ್ ವಾಹನಕ್ಕೆ ಅಫಘಾತವುಂಟಾಗಿರುತ್ತದೆ. 

ಅಪಘಾತದಿಂದ ಗಾಯಗೊಂಡವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಗಂಭೀರ ಗಾಯಗೊಂಡಿದ್ದ ನೆಬಿಸಾ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪಳನಿಸ್ವಾಮಿ ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಹೆದ್ದಾರಿಯಲ್ಲೇ ಯೂ ಟರ್ನ್ ಹೊಡೆಯುತ್ತಿದ್ದ ಕಾರಿಗೆ ಪಿಕಪ್ ಡಿಕ್ಕಿ : ಮಹಿಳೆ ಮೃತ್ಯು, ಐವರಿಗೆ ಗಾಯ Rating: 5 Reviewed By: karavali Times
Scroll to Top