ನೆಹರುನಗರ : ಮಾದಕ ವಸ್ತು ಸೇವಿಸಿ ಅನುಚಿತ ವರ್ತಿಸಿದ್ದಾತ ಬಂಟ್ವಾಳ ಪೊಲೀಸರ ವಶಕ್ಕೆ - Karavali Times ನೆಹರುನಗರ : ಮಾದಕ ವಸ್ತು ಸೇವಿಸಿ ಅನುಚಿತ ವರ್ತಿಸಿದ್ದಾತ ಬಂಟ್ವಾಳ ಪೊಲೀಸರ ವಶಕ್ಕೆ - Karavali Times

728x90

10 September 2026

ನೆಹರುನಗರ : ಮಾದಕ ವಸ್ತು ಸೇವಿಸಿ ಅನುಚಿತ ವರ್ತಿಸಿದ್ದಾತ ಬಂಟ್ವಾಳ ಪೊಲೀಸರ ವಶಕ್ಕೆ

ಬಂಟ್ವಾಳ, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ನೆಹರುನಗರ ಅಂಡರ್ ಪಾಸ್ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾತನನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಸೆ 9 ರಂದು ಮಧ್ಯಾಹ್ನ ನಡೆದಿದೆ. 

ಬಂಧಿತ ಆರೋಪಿಯನ್ನು ಮೂಲತಃ ಸಜಿಪಮೂಡ ಗ್ರಾಮದ ನಿವಾಸಿ, ಪ್ರಸ್ತುತ ಬಿ ಮೂಡ ಗ್ರಾಮದ ಗೂಡಿನಬಳಿಯಲ್ಲಿ ವಾಸವಾಗಿರುವ ಎಸ್ ಮೊಹಮ್ಮದ್ ಮಕ್ಸೂದ್ (20) ಎಂದು ಹೆಸರಿಸಲಾಗಿದೆ. ಸೆ 9 ರಂದು 

ಮಧ್ಯಾಹ್ನ ಸುಮಾರು 12.15ರ ವೇಳೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಆರೋಪಿಯನ್ನು ಪೊಲೀಸರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಆತ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಈತನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ನೆಹರುನಗರ : ಮಾದಕ ವಸ್ತು ಸೇವಿಸಿ ಅನುಚಿತ ವರ್ತಿಸಿದ್ದಾತ ಬಂಟ್ವಾಳ ಪೊಲೀಸರ ವಶಕ್ಕೆ Rating: 5 Reviewed By: karavali Times
Scroll to Top