ಅಪ್ರಾಪ್ತ ಬಾಲಕ-ಬಾಲಕಿಯ ಮೊಬೈಲ್ ಪರಿಚಯ ಮಗು ಹೆರುವವರೆಗೆ : ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು - Karavali Times ಅಪ್ರಾಪ್ತ ಬಾಲಕ-ಬಾಲಕಿಯ ಮೊಬೈಲ್ ಪರಿಚಯ ಮಗು ಹೆರುವವರೆಗೆ : ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು - Karavali Times

728x90

24 September 2026

ಅಪ್ರಾಪ್ತ ಬಾಲಕ-ಬಾಲಕಿಯ ಮೊಬೈಲ್ ಪರಿಚಯ ಮಗು ಹೆರುವವರೆಗೆ : ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು

ಬಂಟ್ವಾಳ, ಸೆಪ್ಟೆಂಬರ್ 24, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ಬಾಲಕ-ಬಾಲಕಿ ಮಧ್ಯೆ ಉಂಟಾದ ಮೊಬೈಲ್ ಪರಿಚಯದಿಂದ ಬಾಲಕಿ ಗರ್ಭವತಿಯಾಗಿ ಮಗವಿಗೆ ಜನ್ಮ ನೀಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. 

ಪ್ರಕರಣದ ಅಪ್ರಾಪ್ತ ನೊಂದ ಬಾಲಕಿಗೆ ಕೇರಳ ರಾಜ್ಯದ ನಿವಾಸಿಯಾದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಪರಿಚಯವಾಗಿ ಮೊಬೈಲ್ ಮೂಲಕ ಸಂಪರ್ಕ ಉಂಟಾಗಿತ್ತು. 2025 ರ ಡಿಸೆಂಬರ್ 21 ರಂದು ಸದ್ರಿ ಬಾಲಕನು ಸಂತ್ರಸ್ಥ ಬಾಲಕಿಯನ್ನು ಆತನ ಮನೆಗೆ ಬರಮಾಡಿಕೊಂಡು ಲೈಂಗಿಕ ದೌರ್ಜನ್ಯವೆಸಗಿರುತ್ತಾನೆ. 

2026 ರ ಸೆ 8 ರಂದು ಅಪ್ರಾಪ್ತ ನೊಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಕೆಯನ್ನು ಮನೆಯವರು ಆಸ್ಪತ್ರೆಗೆ ಕರೆತಂದಿರುತ್ತಾರೆ. ಸೆ 9 ರಂದು ಅಪ್ರಾಪ್ತ ನೊಂದ ಬಾಲಕಿಯು ಮಗುವಿಗೆ ಜನ್ಮ ನೀಡಿರುತ್ತಾಳೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಶೂನ್ಯ ಅಪರಾಧ ಕ್ರಮಾಂಕ 01/2026, ಕಲಂ 4, 5(ಜೆ)(11), 5(ಎಲ್), 6 ಪೆÇೀಕ್ಸೋ ಕಾಯ್ದೆ 2012, ಕಲಂ 64(2)(ಎಂ) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಸ್ಥಳದ ಅಧಾರದಲ್ಲಿ ಸಂಬಂಧಿಸಿದ ಪೆÇಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ.



  • Blogger Comments
  • Facebook Comments

0 comments:

Post a Comment

Item Reviewed: ಅಪ್ರಾಪ್ತ ಬಾಲಕ-ಬಾಲಕಿಯ ಮೊಬೈಲ್ ಪರಿಚಯ ಮಗು ಹೆರುವವರೆಗೆ : ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು Rating: 5 Reviewed By: karavali Times
Scroll to Top