ಪತ್ನಿಗೆ ಹಲ್ಲೆ ನಡೆಸುತ್ತಿದ್ದ ಆರೋಪಿಯ ವಿಚಾರಣೆಗೆ ತೆರಳಿದ್ದ ಪೊಲೀಸರಿಗೂ ಹಲ್ಲೆ ನಡೆಸಿದ ಆರೋಪಿ : ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಪತ್ನಿಗೆ ಹಲ್ಲೆ ನಡೆಸುತ್ತಿದ್ದ ಆರೋಪಿಯ ವಿಚಾರಣೆಗೆ ತೆರಳಿದ್ದ ಪೊಲೀಸರಿಗೂ ಹಲ್ಲೆ ನಡೆಸಿದ ಆರೋಪಿ : ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

6 September 2026

ಪತ್ನಿಗೆ ಹಲ್ಲೆ ನಡೆಸುತ್ತಿದ್ದ ಆರೋಪಿಯ ವಿಚಾರಣೆಗೆ ತೆರಳಿದ್ದ ಪೊಲೀಸರಿಗೂ ಹಲ್ಲೆ ನಡೆಸಿದ ಆರೋಪಿ : ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : ದೂರು ಪರಿಶೀಲನೆಗೆ ತೆರಳಿದ್ದ ಪೊಲೀಸರಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರು ಪಡ್ನೂರು ಗ್ರಾಮದ ಮುಂಡಾಜೆ ಎಂಬಲ್ಲಿ ಸೆ 4 ರಂದು ರಾತ್ರಿ ವೇಳೆ ನಡೆದಿದೆ. 

ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಮಧು ಹಾಗೂ ಭೀಮನ ಗೌಡ ಎಂ ಬಿರಾದರ್ ಅವರುಗಳು ಸೆ 4 ರಂದು ರಾತ್ರಿ ವೇಳೆ ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿದ್ದಾಗ ಬಂದ ದೂರನ್ನು ಸ್ವೀಕರಿಸಿಕೊಂಡು ಪುತ್ತೂರು ಪಡ್ನೂರು ಗ್ರಾಮ ಮುಂಡಾಜೆ ಎಂಬಲ್ಲಿಗೆ ತೆರಳಿದ್ದಾರೆ. ಸ್ಥಳಕ್ಕೆ ತೆರಳಿದಾಗ ಮಹಿಳೆಯೋರ್ವರು ತನ್ನ ಗಂಡ ತನಗೆ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಆರೋಪಿ ನವೀನ್ ಎಂಬವರ ಬಳಿ ವಿಚಾರಿಸಿದಾಗ, ಆತ ಕೋಪಗೊಂಡು ತನ್ನ ಪತ್ನಿಗೆ ಹಲ್ಲೆ ನಡೆಸಲು ಯತ್ನಿಸಿರುತ್ತಾನೆ. ಈ ವೇಳೆ ತಡೆಯಲು ಹೋದ ಪೆÇಲೀಸ್ ಸಿಬ್ಬಂದಿಗಳಿಗೂ ನವೀನ್, ಆತನ ತಾಯಿ ಮತ್ತು ಸಹೋದರ ಸೇರಿ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2026, ಕಲಂ 352, 132, 121(1) ಜೊತೆಗೆ 3(5) ಬಿ.ಎನ್.ಎಸ್-2023 ರಂತೆ ಪ್ರಕರಣ ದಾಖಲಾಗಿದೆ. 

ಪ್ರಕರಣದ ಆರೋಪಿ ನವೀನ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಯಿಂದ ಬಿಡುಗಡೆಗೊಂಡ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪತ್ನಿಗೆ ಹಲ್ಲೆ ನಡೆಸುತ್ತಿದ್ದ ಆರೋಪಿಯ ವಿಚಾರಣೆಗೆ ತೆರಳಿದ್ದ ಪೊಲೀಸರಿಗೂ ಹಲ್ಲೆ ನಡೆಸಿದ ಆರೋಪಿ : ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top