ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವೇಣೂರು ಪೊಲೀಸರ ದಾಳಿ : ನಾಲ್ವರ ಬಂಧನ, 7 ಕೋಳಿ ವಶಕ್ಕೆ - Karavali Times ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವೇಣೂರು ಪೊಲೀಸರ ದಾಳಿ : ನಾಲ್ವರ ಬಂಧನ, 7 ಕೋಳಿ ವಶಕ್ಕೆ - Karavali Times

728x90

19 October 2026

ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವೇಣೂರು ಪೊಲೀಸರ ದಾಳಿ : ನಾಲ್ವರ ಬಂಧನ, 7 ಕೋಳಿ ವಶಕ್ಕೆ

ಬಂಟ್ವಾಳ, ಅಕ್ಟೋಬರ್ 19, 2026 (ಕರಾವಳಿ ಟೈಮ್ಸ್) : ಅಂಡಿಂಜೆ ಗ್ರಮದ ಕಾಣಲಚ್ಚಿ ಎಂಬಲ್ಲಿ ಅ 18 ರಂದು ಮಧ್ಯಾಹ್ನ ನಡೆಯುತ್ತಿದ್ದ ಕೋಳಿ ಅಂಕ ಸ್ಥಳಕ್ಕೆ ದಾಳಿ ನಡೆಸಿದ ವೇಣೂರು ಪೊಲೀಸರು 4 ಮಂದಿಯನ್ನು ಬಂಧಿಸಿ 7 ಅಂಕದ ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಬಂಧಿತ ಆರೋಪಿಗಳನ್ನು ಮೋಹನ ಗೌಡ (45), ದಿನೇಶ (45), ಪ್ರಶಾಂತ (35) ಹಾಗೂ ಧೀರಜ್ ಎಂದು ಹೆಸರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸ್ ಠಾಣಾ ಪಿಎಸ್ಸೈ ಅಕ್ಷಯ ಡವಗಿ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿದ್ದ 7 ಅಂಕದ ಕೋಳಿಗಳನ್ನು, 3 ದ್ವಿಚಕ್ರ ವಾಹನಗಳನ್ನು ಹಾಗೂ 1 ಅಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವೇಣೂರು ಪೊಲೀಸರ ದಾಳಿ : ನಾಲ್ವರ ಬಂಧನ, 7 ಕೋಳಿ ವಶಕ್ಕೆ Rating: 5 Reviewed By: karavali Times
Scroll to Top