ಮಹಿಳೆಯ ಮೇಲೆ ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ, ಆಸ್ತಿ ಲಪಟಾಯಿಸಲು ಸಂಚು : ಆರೋಪಿ ಬಂಧನ - Karavali Times ಮಹಿಳೆಯ ಮೇಲೆ ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ, ಆಸ್ತಿ ಲಪಟಾಯಿಸಲು ಸಂಚು : ಆರೋಪಿ ಬಂಧನ - Karavali Times

728x90

25 October 2026

ಮಹಿಳೆಯ ಮೇಲೆ ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ, ಆಸ್ತಿ ಲಪಟಾಯಿಸಲು ಸಂಚು : ಆರೋಪಿ ಬಂಧನ

ಮಂಗಳೂರು, ಅಕ್ಟೋಬರ್ 25, 2026 (ಕರಾವಳಿ ಟೈಮ್ಸ್) : ಮಹಿಳೆಯ ಮೇಲೆ ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ, ಆಸ್ತಿ ಲಪಟಾಯಿಸಲು ಸಂಚು ರೂಪಿಸಿದ್ದ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಂಗಳೂರು ಶಕ್ತಿನಗರ, ಪದವು, ಗಾನ ಮಜಲ್ ನಿವಾಸಿ ಜೋಸೆಫ್ ಥೋರೆಸ್ ಎಂಬವರ ಪುತ್ರ ನವೀನ್ ಥೋರಸ್ (42) ಎಂದು ಹೆಸರಿಸಲಾಗಿದೆ. 

ಈ ಬಗ್ಗೆ ಶ್ರೀಮತಿ ಮಾಯ ಅನ್ನಾಮೇರಿ ರೇಗೋ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಮೇಲೆ ಕೊಲೆಯಂತಹ ಗಂಭೀರವಾದ ಸುಳ್ಳು ಆರೋಪ ಹೊರಿಸಿ ಹಣ, ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಿ ಸಾರ್ವಜನಿಕವಾಗಿ ಕುಟುಂಬದ ಗೌರವಕ್ಕೆ ದಕ್ಕೆ ತಂದಿರುವ ವಿರುದ್ದ ಕ್ರಮ ಕೈಗೊಳ್ಳುವಂತೆ ಅ 10 ರಂದು ಅವರು ಉರ್ವಾ ಪೆÇಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು. 

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸಾಕ್ಷಾಧಾರಗಳ ಆಧಾರದ ಮೇಲೆ ಅ 23 ರಂದು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಅ 24 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಮುಂದಿನ  ಕ್ರಮ  ಕೈಗೊಳ್ಳಲಾಗುವುದು ಎಂದಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಹಿಳೆಯ ಮೇಲೆ ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ, ಆಸ್ತಿ ಲಪಟಾಯಿಸಲು ಸಂಚು : ಆರೋಪಿ ಬಂಧನ Rating: 5 Reviewed By: karavali Times
Scroll to Top