ಐಶಾರಾಮಿ ಜೀವನಕ್ಕಾಗಿ ದಬಾರಿ ಬೈಕ್ ಕಳವು ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು : ಮೂವರ ಅಪ್ರಾಪ್ತರ ಸಹಿತ 7 ಮಂದಿ ಆರೋಪಿಗಳು ಅಂದರ್, ಕಳವುಗೈದ ಬೈಕುಗಳ ಸಹಿತ ಒಟ್ಟು 9 ಟೂ ವ್ಹೀಲರ್ ವಶಕ್ಕೆ - Karavali Times ಐಶಾರಾಮಿ ಜೀವನಕ್ಕಾಗಿ ದಬಾರಿ ಬೈಕ್ ಕಳವು ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು : ಮೂವರ ಅಪ್ರಾಪ್ತರ ಸಹಿತ 7 ಮಂದಿ ಆರೋಪಿಗಳು ಅಂದರ್, ಕಳವುಗೈದ ಬೈಕುಗಳ ಸಹಿತ ಒಟ್ಟು 9 ಟೂ ವ್ಹೀಲರ್ ವಶಕ್ಕೆ - Karavali Times

728x90

25 October 2026

ಐಶಾರಾಮಿ ಜೀವನಕ್ಕಾಗಿ ದಬಾರಿ ಬೈಕ್ ಕಳವು ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು : ಮೂವರ ಅಪ್ರಾಪ್ತರ ಸಹಿತ 7 ಮಂದಿ ಆರೋಪಿಗಳು ಅಂದರ್, ಕಳವುಗೈದ ಬೈಕುಗಳ ಸಹಿತ ಒಟ್ಟು 9 ಟೂ ವ್ಹೀಲರ್ ವಶಕ್ಕೆ

ಮಂಗಳೂರು, ಅಕ್ಟೋಬರ್ 25, 2026 (ಕರಾವಳಿ ಟೈಮ್ಸ್) : ನಗರದ ವಿವಿಧೆಡೆ ಹಲವು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ ಪ್ರಕರಣ ಬೇಧಿಸಿದ ಪೊಲೀಸರು ಮೂವರು ಅಪ್ರಾಪ್ತರ ಸಹಿತ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಕಳವುಗೈದ 6 ದ್ವಿಚಕ್ರ ವಾಹನಗಳ ಸಹಿತ ಒಟ್ಟು 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಗಳನ್ನು ವಾಮಂಜೂರು-ಮೂಡುಶೆಡ್ಡೆ ಶಿವನಗರ ನಿವಾಸಿಗಳಾದ ಫೈಝಲ್ ಅಹ್ಮದ್ ಅವರ ಪುತ್ರ ಮಹಮ್ಮದ್ ಸಿಯಾಮ್ (19), ದಿವಂಗತ ಅಬ್ದುಲ್ ರಶೀದ್ ಅವರ ಪುತ್ರ ಮೊಹಮ್ಮದ್ ರಾಹೀಲ್ (18) ಬೈಕಂಪಾಡಿ-ತೋಕೂರು ನಿವಾಸಿ ಟಿ ಅಬ್ದುಲ್ ರಹೀಂ ಅವರ ಪುತ್ರ ಮುಹಮ್ಮದ್ ನಾಸೀಫ್ ಅಲಿಯಾಸ್ ನಸೀಫ್ (19), ತಿರುವೈಲು, ಕುಟ್ಟಿಪಲ್ಕೆ ಸದಾಶಿವ ನಗರ ನಿವಾಸಿ ರೋಣಪ್ಪ ಮಾಧರ್ ಅವರ ಪುತ್ರ ನಿಖಿಲ್ (18) ಹಾಗೂ ಇತರ ಮೂವರು ಅಪ್ರಾಪ್ತ ಬಾಲಕರು ಎಂದು ಹೆಸರಿಸಲಾಗಿದೆ. 

ಮಂಗಳೂರು ನಗರ ದಕ್ಷಿಣ ಪೆÇಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ ಜಂಕ್ಷನ್ ಬಳಿಯಿರುವ ಡಾನ್  ಬಾಸ್ಕೋ ಹಾಸ್ಟೆಲ್ ಬಳಿ ಅ 12 ರಂದು ನಿಲ್ಲಿಸಿದ್ದ ಕೆ.ಟಿ.ಎಂ ಡ್ಯೂಕ್ ಬೈಕ್, ಅ 19 ರಂದು ಜಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಯಮಹಾ ಎಫ್.ಝಡ್ ಬೈಕ್, ಅ 21 ರಂದು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಬಳಿಯಿರುವ ದುರ್ಗಾ ಹೋಟೇಲ್ ಮುಂದೆ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಅ 22 ರಂದು ಹೊಯಿಗೆ ಬಜಾರ್ ಭಗವತಿ ಅಪಾರ್ಟಮೆಂಟ್ ಕೆಳಗೆ ನಿಲ್ಲಿಸಿದ್ದ ಕೆ.ಟಿ.ಎಂ. ಡ್ಯೂಕ್ ಬೈಕ್ ಕಳವಾಗಿರುತ್ತದೆ. ಅದೇ ರೀತಿ, ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೆÇೀಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಳಿ ಅ 18 ರಂದು ನಿಲ್ಲಿಸಲಾಗಿದ್ದ ರಾಯಲ್ ಎನ್ ಪೀಲ್ಡ್ ಬುಲೆಟ್ ಬೈಕ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿ ಅ 21 ರಂದು ಯಮಹಾ ಎಫ್.ಝಡ್ ಬೈಕ್ ಕಳವಾಗಿರುತ್ತದೆ. ಈ ಸಂಬಂಧ ಮಂಗಳೂರು ದಕ್ಷಿಣ ಪೆÇಲೀಸ್ ಠಾಣೆಯಲ್ಲಿ 4 ಪ್ರಕರಣಗಳು ಹಾಗೂ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿತ್ತು.

ಕಳವಾಗಿರುವ ದ್ವಿಚಕ್ರ ವಾಹನಗಳ ಆರೋಪಿಗಳ ಪತ್ತೆಗಾಗಿ ಮಂಗಳೂರು ದಕ್ಷಿಣ ಪೆÇಲೀಸ್ ಠಾಣೆಯ ಪೆÇಲೀಸ್ ಉಪನಿರೀಕ್ಷಕರು ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಸದರಿ ತಂಡವು ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸುವ ಮೂಲಕ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ. 

ಅರೋಪಿಗಳು ಕಳವು ಮಾಡಲಾಗಿದ್ದ ಎಲ್ಲಾ 6 ದ್ವಿಚಕ್ರ ವಾಹನಗಳನ್ನು, ಮತ್ತು ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇವುಗಳ ಒಟ್ಟು ಅಂದಾಜು ಮೌಲ್ಯ 4.50 ಲಕ್ಷ ರೂಪಾಯಿಗಳಾಗಿರುತ್ತದೆ.

ವಿಚಾರಣೆಯಿಂದ, ಆರೋಪಿಗಳು ಇತರ ದುಶ್ಕೃತ್ಯಗಳಾದ ಸರಗಳ್ಳತನ ಮುಂತಾದ ಕೃತ್ಯಗಳನ್ನು ಎಸಗಿ ಅದರ ಲಾಬಾಂಶದಿಂದ  ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಬೆಲೆ ಬಾಳುವ ಬೈಕ್ ಗಳನ್ನು ಗುರಿಯಾಗಿಸಿ, ನಿಲುಗಡೆ ಮಾಡಿದ್ದ ಸ್ಥಳಗಳಿಂದ ಕಳವು ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತನಿಖೆಯಿಂದ ತಿಳಿದುಬಂದಿದೆ. ಬಂಧಿತ 4 ಜನ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಈ ಪತ್ತೆ ಕಾರ್ಯದಲ್ಲಿ ಮಂಗಳೂರು ದಕ್ಷಿಣ ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ರಾಘವೇಂದ್ರ ಬೈಂದೂರ ಅವರ ನೇತೃತ್ವದಲ್ಲಿ ಪಿ.ಎಸ್.ಐ ಮಾರುತಿ ಹಾಗೂ ಕ್ರೈಂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್, ಅವರು ಭಾಗವಹಿಸಿದ್ದು, ಮಂಗಳೂರು ದಕ್ಷಿಣ ಠಾಣಾ ಅಧಿಕಾರಿ ಸಿಬ್ಬಂದಿಯವರು ಪತ್ತೆ ಕಾರ್ಯಕ್ಕೆ ಸಹಕರಿಸುತ್ತಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಐಶಾರಾಮಿ ಜೀವನಕ್ಕಾಗಿ ದಬಾರಿ ಬೈಕ್ ಕಳವು ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು : ಮೂವರ ಅಪ್ರಾಪ್ತರ ಸಹಿತ 7 ಮಂದಿ ಆರೋಪಿಗಳು ಅಂದರ್, ಕಳವುಗೈದ ಬೈಕುಗಳ ಸಹಿತ ಒಟ್ಟು 9 ಟೂ ವ್ಹೀಲರ್ ವಶಕ್ಕೆ Rating: 5 Reviewed By: karavali Times
Scroll to Top