ಶುಭ ವಿವಾಹ : ಇಝಾವುದ್ದೀನ್ - ನೌಶೀನಾ : ಮುಸ್ತಫಾ - ಅಸ್ಮಾ - Karavali Times ಶುಭ ವಿವಾಹ : ಇಝಾವುದ್ದೀನ್ - ನೌಶೀನಾ : ಮುಸ್ತಫಾ - ಅಸ್ಮಾ - Karavali Times

728x90

8 October 2026

ಶುಭ ವಿವಾಹ : ಇಝಾವುದ್ದೀನ್ - ನೌಶೀನಾ : ಮುಸ್ತಫಾ - ಅಸ್ಮಾ

ಬಂಟ್ವಾಳ, ಅಕ್ಟೋಬರ್ 09, 2026 (ಕರಾವಳಿ ಟೈಮ್ಸ್) : ಕುಕ್ಕಾಜೆ-ಕಾಪಿಕಾಡ್, ಸುವರ್ಣಬೈಲು ನಿವಾಸಿ ಅಬ್ದುಲ್ ಹಮೀದ್ ಅವರ ಸುಪುತ್ರ ಇಝಾವುದ್ದೀನ್ ಅಲಿ (ಇಝ್ಮು) ಅವರ ವಿವಾಹವು ಕೊಳ್ನಾಡು ಗ್ರಾಮದ ಕುಡ್ತಮುಗೇರು ನಿವಾಸಿ ಉಮ್ಮರ್ ಅವರ ಸುಪುತ್ರಿ ನೌಶೀನಾ ಎಂಬ ವಧುವಿನೊಂದಿಗೆ ಹಾಗೂ ಸುಪುತ್ರ ಮುಹಮ್ಮದ್ ಮುಸ್ತಫಾ ಅವರ ವಿವಾಹವು ಸಾಲೆತ್ತೂರು-ನಾಟೆಕಲ್ ನಿವಾಸಿ ಮರ್ಹೂಂ ಅಬೂಬಕ್ಕರ್ ಅವರ ಸುಪುತ್ರಿ ಅಸ್ಮಾ ಕೆ. ಎಂಬ ವಧುವಿನೊಂದಿಗೆ ಅಕ್ಟೊಬರ್ 8 ರಂದು ಪಾಣೆಮಂಗಳೂರು-ಆಲಡ್ಕದ ಎಸ್.ಎಸ್. ಆಡಿಟೋರಿಯಂನಲ್ಲಿ ನೆರವೇರಿತು.

ಹಾಜಿ ಬಿ.ಎಚ್. ಅಬೂಸ್ವಾಲಿಹ್ ಉಸ್ತಾದ್ ಆಲಡ್ಕ ಹಾಗೂ ಸಯ್ಯಿದ್ ಪೂಕೋಯ ತಂಙಳ್ ಉದ್ಯಾವರ ಅವರು ನಿಕಾಹ್ ನೆರವೇರಿಸಿದರು. ಈ ಸಂದರ್ಭ ಮುಹಮ್ಮದ್ ಮುಸ್ಲಿಯಾರ್ ಕಟ್ಟತ್ತಿಲ, ಅಬ್ದುಲ್ ರಹ್ಮಾನ್ ಫೈಝಿ ಪರ್ತಿಪ್ಪಾಡಿ, ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಸಹಿತ ಹಲವು ಗಣ್ಯರು, ಬಂಧು-ಮಿತ್ರರು ಹಾಗೂ ಹಿತೈಷಿಗಳು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಶುಭ ವಿವಾಹ : ಇಝಾವುದ್ದೀನ್ - ನೌಶೀನಾ : ಮುಸ್ತಫಾ - ಅಸ್ಮಾ Rating: 5 Reviewed By: karavali Times
Scroll to Top