ನಕಲಿ ಪಾಸ್ ಪೋರ್ಟ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ - Karavali Times ನಕಲಿ ಪಾಸ್ ಪೋರ್ಟ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ - Karavali Times

728x90

8 October 2026

ನಕಲಿ ಪಾಸ್ ಪೋರ್ಟ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ

ಮಂಗಳೂರು, ಅಕ್ಟೋಬರ್ 09, 2026 (ಕರಾವಳಿ ಟೈಮ್ಸ್) : 2010 ರ ಜೂನ್ 22 ರಂದು ನಕಲಿ ಪಾಸ್ ಪೆÇೀರ್ಟ್  ಪಡೆದು ಬಜಪೆ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ  ತೆರಳಲು ಯತ್ನಿಸಿದ ಆರೋಪಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ, ಬೇವಿಂಜೆ ಗ್ರಾಮದ ತೆಕ್ಕಿಲ್ ಪೇರಿ ಅಂಚೆ ವ್ಯಾಪ್ತಿಯ, ಬೇವಿಂಜ್ ಮನೆ ನಿವಾಸಿ ಅಮ್ಮಣ್ಣಿಯನ್ ಎಂಬವರ ಪುತ್ರ ವೇಲಾಯುಧನ್ (37) ಎಂಬಾತನನನ್ನು ಬಜ್ಪೆ ವಿಮಾನ ನಿಲ್ದಾಣದ ಎಮಿಗ್ರೇಶನ್ ಅಧಿಕಾರಿ ಕೆ.ಎಂ. ಚಂದ್ರಶೇಖರ್ ಅವರು ವಶಕ್ಕೆ ಪಡೆದು ಬಜಪೆ ಠಾಣೆಗೆ ನೀಡಿದ ದೂರಿನಂತೆ ಬಜಪೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ತನಿಖಾಧಿಕಾರಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸೆಷನ್ಸ್  ನ್ಯಾಯಾಲಯವು 2020 ರ ಡಿಸೆಂಬರ್  ರಂದು ಆರೋಪಿಗೆ  1 ವರ್ಷ 6 ತಿಂಗಳ ಕಾಲ ಶಿಕ್ಷೆ ವಿಧಿಸಿದ್ದು, ನಂತರ  ಆರೋಪಿ ವೇಲಾಯುಧನ್ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿವಿಜನ್ ಪಿಟಿಷನ್ ಮೇಲ್ಮನವಿ ಸಲ್ಲಿಸಿದ್ದು, ಉಚ್ಚ ನ್ಯಾಯಾಲಯವು ಆತನ ಮನವಿಯನ್ನು  ತಿರಸ್ಕರಿಸಿತ್ತು. 

ಉಚ್ಚ ನ್ಯಾಯಾಲಯವು ಆತನ ಮನವಿಯನ್ನು ತಿರಸ್ಕರಿಸಿದ ನಂತರ ಆರೋಪಿ ವೇಲಾಯುಧನ್ ದಸ್ತಗಿರಿಗೆ ಸಿಗದೇ ತಲೆ ಮರೆಸಿಕೊಂಡಿದ್ದವನನ್ನು ಅಕ್ಟೋಬರ್ 8  ರಂದು ಮಂಗಳೂರು ಉತ್ತರ  ಉಪ ವಿಭಾಗದ ಎ.ಸಿ.ಪಿ ಅವರ ತಂಡ ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಬಜಪೆ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

  • Blogger Comments
  • Facebook Comments

0 comments:

Post a Comment

Item Reviewed: ನಕಲಿ ಪಾಸ್ ಪೋರ್ಟ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ Rating: 5 Reviewed By: karavali Times
Scroll to Top