ಜೈನರಪೇಟೆ : ಗೋದಾಮಿನಲ್ಲಿರಿಸಿದ್ದ ಎಸಿ, ಫ್ಯಾನ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಜೈನರಪೇಟೆ : ಗೋದಾಮಿನಲ್ಲಿರಿಸಿದ್ದ ಎಸಿ, ಫ್ಯಾನ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

3 October 2026

ಜೈನರಪೇಟೆ : ಗೋದಾಮಿನಲ್ಲಿರಿಸಿದ್ದ ಎಸಿ, ಫ್ಯಾನ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಅಕ್ಟೋಬರ್ 03, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಜೈನರಪೇಟೆ ಎಂಬಲ್ಲಿ ಗೋದಾಮಿನಲ್ಲಿರಿಸಲಾಗಿದ್ದ ಎಸಿ ಹಾಗೂ ಫ್ಯಾನುಗಳನ್ನು ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೈನರಪೇಟೆ ನಿವಾಸಿ ಬಿ ವೈ ಅಬ್ದುಲ್ ಗಪೂರ್ ಬಿನ್ ದಿವಂಗತ ಪಿ ಎಸ್ ಯೂಸುಫ್ (54) ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರ ಮನೆಯ ಪಕ್ಕದಲ್ಲಿರುವ ಗೋಡೌನಿನಲ್ಲಿ ಸೆ 22 ರಂದು ಬೆಳಿಗ್ಗೆ 11 ಗಂಟೆಗೆ 2 ಹವಾ ನಿಯಂತ್ರಣ ಮತ್ತು 15 ಫ್ಯಾನುಗಳನ್ನು ಇರಿಸಿರುತ್ತಾರೆ. ಬಳಿಕ ಸೆ 29 ರಂದು ಸಂಜೆ 6 ಗಂಟೆಗೆ ಗೋಡೌನಿಗೆ ಬಂದು ತೆರೆದು ನೋಡಿದಾಗ ಯಾರೋ ಕಳ್ಳರು ಮನೆಯ ಬಾಗಿಲನ್ನು ದೂಡಿ ಚಿಕ ತೆಗೆದು ಒಳಪ್ರವೇಶಿಸಿ, 2 ಹವಾ ನಿಯಂತ್ರಣ ಮತ್ತು 2 ಫ್ಯಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಕಳವುಗೈದ ಸೊತ್ತುಗಳ ಮೌಲ್ಯ 57 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜೈನರಪೇಟೆ : ಗೋದಾಮಿನಲ್ಲಿರಿಸಿದ್ದ ಎಸಿ, ಫ್ಯಾನ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top