ಚರ್ಮ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಡಿಸೆಂಬರಿನಲ್ಲಿ ಕಾರ್ಯಾಗಾರ : ಸಚಿವ ಮುನಿಯಪ್ಪ - Karavali Times ಚರ್ಮ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಡಿಸೆಂಬರಿನಲ್ಲಿ ಕಾರ್ಯಾಗಾರ : ಸಚಿವ ಮುನಿಯಪ್ಪ - Karavali Times

728x90

28 October 2026

ಚರ್ಮ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಡಿಸೆಂಬರಿನಲ್ಲಿ ಕಾರ್ಯಾಗಾರ : ಸಚಿವ ಮುನಿಯಪ್ಪ

ಬೆಂಗಳೂರು, ಅಕ್ಟೋಬರ್ 28, 2026 (ಕರಾವಳಿ ಟೈಮ್ಸ್) : ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಇಂದಿಗೆ 50 ವರ್ಷಗಳನ್ನು ಪೂರೈಸಿದ್ದು, ವಸಂತನಗರದ ಲಿಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಂಕೇತಿಕ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖಾ ಸಚಿವ ಕೆ.ಎಚ್ ಮುನಿಯಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, 1976ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಇಂದಿಗೆ 50 ವಸಂತಗಳನ್ನು  ಪೂರೈಸಿದೆ. ದೇವರಾಜ್ ಅರಸು ಮುಖ್ಯಮಂತ್ರಿಗಳಿದ್ದಾಗ ಆರಂಭವಾದ ಈ ನಿಗಮವು ಪ್ರಥಮ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ಅವರು ಕಾರ್ಯನಿರ್ವಹಿಸಿದ್ದು ಈಗ ಅವರು ರಾಷ್ಟ್ರದ ನಾಯಕರಾಗಿ ಎ.ಐ..ಸಿ.ಸಿ ಅಧ್ಯಕ್ಷರಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಗಮದ ಅಧ್ಯಕ್ಷರುಗಳು ಸಚಿವರು, ಸಂಸದರಾಗಿ ಕಾರ್ಯನಿರ್ವಹಿಸಿರುವುದು ಇತಿಹಾಸ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದರು. 

ಈ ನಿಗಮವು ಪರಿಶಿಷ್ಟ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ ಸೇವೆ ನೀಡುತ್ತಿದೆ ಎಂದ ಸಚಿವರು, ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಮಹತ್ವದ ತೀರ್ಮಾನವನ್ನು ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗೂ ಒಳಮೀಸಲಾತಿ ಅನುಷ್ಟಾನಗೊಳಿಸಲಾಗಿದ್ದು, ಮೀಸಲಾತಿಯೂ ಶೇ. 50 ರಷ್ಟು ಮೀರಬಾರದೆಂಬ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಶೇ. 15 ರಷ್ಟು ಮೀಸಲಾತಿ ಅನ್ವಯ ಶಿಕ್ಷಣ, ಉದ್ಯೋಗದಲ್ಲಿ ಅಳವಡಿಸಲಾಗಿದೆ. ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಅನುಗುಣವಾಗಿ ಹೆಚ್ಚಿಸಲು ಕ್ಯಾಬಿನೆಟಿನಲ್ಲಿ ತೀರ್ಮಾನಿಸಿದ್ದು, ಸುಪ್ರೀಂಕೋಟ ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದರು. 

ಚರ್ಮ ಕುಶಲಕರ್ಮಿಗಳು ತಯಾರಿಸಿದ ಚರ್ಮೋತ್ಪನ್ನಗಳು ಆಯಾ ಜಿಲ್ಲೆಯಲ್ಲೇ ಶೋರೂಂಗಳನ್ನು ತೆರೆಯುವ ಮೂಲಕ ಮಾರಾಟವಾಗಲು ಕ್ರಮವಹಿಸಬೇಕು ಎಂದ ಸಚಿವರು, ಲಿಡ್ಕರ್ ಸಂಸ್ಥೆಯು ಖಾಸಗಿ ಕಂಪೆನಿಗಳ ಜೊತೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಸಿದ್ದಿಯನ್ನು ಪಡೆದಾಗ ಚರ್ಮೋತ್ಪನ್ನಗಳ ಬೇಡಿಕೆ ಹೆಚ್ಚಾಗಿ ಉತ್ಪಾದನೆ ಹೆಚ್ಚಾಗುತ್ತದೆ ಎಂದರು. 

ಎಚ್. ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಿದ್ದಾಗ ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ ಮಾಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಪೆÇ್ರೀತ್ಸಾಹ ನೀಡಿ ಕಲಿಕೆ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದ್ದರು. ಒಟ್ಟಾರೆ ರಾಜ್ಯದಲ್ಲಿ 874 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 60 ವಸತಿ ಶಾಲೆಗಳ ನಿರ್ಮಾಣ ಬಾಕಿ ಉಳಿದಿದೆ. ಈಗಾಗಲೇ 40 ಶಾಲೆಗಳಿಗೆ ಅನುಮತಿ ದೊರೆತಿದ್ದು, ಉಳಿದ 20 ವಸತಿ ಶಾಲೆಗಳ ನಿರ್ಮಾಣವಾದರೆ ಹೋಬಳಿಗೊಂದು ವಸತಿ ಶಾಲೆ ಆದಂತಾಗುತ್ತದೆ ಎಂದರು. 

ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಈ ನಿಗಮದ ಚರ್ಮ ಕುಶಲಕರ್ಮಿಗಳ ವಸ್ತುಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಯೋಜನೆ ರೂಪಿಸಿ ಉತ್ತಮ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಭಾಗವಹಿಸುವ ಹಿನ್ನೆಲೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು. 

ಈ ಸಂದರ್ಭ ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಸರ್ಕಾರದ ಕಾರ್ಯದರ್ಶಿ ಕೆ.ಪಿ. ಮೋಹನ್ ರಾಜ್, ಸರ್ಕಾರದ ಆಯುಕ್ತ ಎನ್.ಎಂ. ನಾಗರಾಜ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಂದ್ರ, ಅಲೆಮಾರಿ ನಿಗಮದ ಅಧ್ಯಕ್ಷ ಪಲ್ಲವಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ್ ಸಾಲಪ್ಪ, ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ರಸಾದ್, ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್. ನಟರಾಜ್ ಹಾಗೂ ಲಿಡ್ಕರ್ ಮಾಜಿ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಚರ್ಮ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಡಿಸೆಂಬರಿನಲ್ಲಿ ಕಾರ್ಯಾಗಾರ : ಸಚಿವ ಮುನಿಯಪ್ಪ Rating: 5 Reviewed By: karavali Times
Scroll to Top