36ನೇ ಅಖಿಲ ಭಾರತ ಅಂತರ್-ರೈಲ್ವೆ ಆರ್.ಪಿ.ಎಫ್. ವೈಜ್ಞಾನಿಕ ತನಿಖಾ ವಿಧಾನಗಳ ಸ್ಪರ್ಧೆ : ನೈರುತ್ಯ ರೈಲ್ವೆ ಗಮನಾರ್ಹ ಸಾಧನೆ, 3 ಚಿನ್ನ, 1 ಬೆಳ್ಳಿ-ಕಂಚು ಪದಕ - Karavali Times 36ನೇ ಅಖಿಲ ಭಾರತ ಅಂತರ್-ರೈಲ್ವೆ ಆರ್.ಪಿ.ಎಫ್. ವೈಜ್ಞಾನಿಕ ತನಿಖಾ ವಿಧಾನಗಳ ಸ್ಪರ್ಧೆ : ನೈರುತ್ಯ ರೈಲ್ವೆ ಗಮನಾರ್ಹ ಸಾಧನೆ, 3 ಚಿನ್ನ, 1 ಬೆಳ್ಳಿ-ಕಂಚು ಪದಕ - Karavali Times

728x90

15 October 2026

36ನೇ ಅಖಿಲ ಭಾರತ ಅಂತರ್-ರೈಲ್ವೆ ಆರ್.ಪಿ.ಎಫ್. ವೈಜ್ಞಾನಿಕ ತನಿಖಾ ವಿಧಾನಗಳ ಸ್ಪರ್ಧೆ : ನೈರುತ್ಯ ರೈಲ್ವೆ ಗಮನಾರ್ಹ ಸಾಧನೆ, 3 ಚಿನ್ನ, 1 ಬೆಳ್ಳಿ-ಕಂಚು ಪದಕ

ಮಂಗಳೂರು, ಅಕ್ಟೋಬರ್ 15, 2026 (ಕರಾವಳಿ ಟೈಮ್ಸ್) : ಮೈಸೂರು ಕಾರ್ಯಾಗಾರದ ರೈಲ್ವೆ ರಕ್ಷಣಾ ಪಡೆ (ಆರ್‍ಪಿಎಫ್) ಇನ್ಸ್ ಪೆಕ್ಟರ್ ಸಿ. ಶಿವರಾಜು ಅವರು ಮಹಾರಾಷ್ಟ್ರದ ನಾಸಿಕ್ ನ ಆರ್‍ಪಿಎಫ್ ವಲಯ ತರಬೇತಿ ಕೇಂದ್ರದಲ್ಲಿ 2026ರ ಅಕ್ಟೋಬರ್ 14 ರಿಂದ 15 ರವರೆಗೆ ನಡೆದ 36ನೇ ಅಖಿಲ ಭಾರತ ಅಂತರ್-ರೈಲ್ವೆ ಆರ್‍ಪಿಎಫ್ ವೈಜ್ಞಾನಿಕ ತನಿಖಾ ವಿಧಾನಗಳ ಸ್ಪರ್ಧೆ-2026ರಲ್ಲಿ ನೈಋತ್ಯ ರೈಲ್ವೆಯನ್ನು ಪ್ರತಿನಿಧಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಈ ಸ್ಪರ್ಧೆಯಲ್ಲಿ ಸಿ. ಶಿವರಾಜು ಅವರು ತಮ್ಮ ವೃತ್ತಿಪರ ಜ್ಞಾನ, ತನಿಖಾ ಕೌಶಲ ಮತ್ತು ಪರಿಣತಿಯನ್ನು ಪ್ರದರ್ಶಿಸಿ ಒಟ್ಟು ಐದು ಪದಕಗಳನ್ನು ಗೆದ್ದಿದ್ದಾರೆ. ಕಾನೂನು ಮತ್ತು ತನಿಖೆ ವಿಭಾಗ, ವೈದ್ಯಕೀಯ-ಕಾನೂನು ವಿಷಯ (ಮೌಖಿಕ) ವಿಭಾಗ, ಸಾಕ್ಷ್ಯ ವಸ್ತುಗಳ ಸಂಗ್ರಹಣೆ ಮತ್ತು ಪ್ಯಾಕಿಂಗ್ ವಿಭಾಗದಲ್ಲಿ ಮೂರು ಚಿನ್ನದ ಪದಕ, ಬೆರಳಚ್ಚು ವಿಭಾಗದಲ್ಲಿ ಬೆಳ್ಳಿ ಪದಕ, ವಿಧಿ ವಿಜ್ಞಾನ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದು, ಸಿ ಶಿವರಾಜು ಅವರ ಈ ಅತ್ಯುತ್ತಮ ಸಾಧನೆಯು ಸ್ಪರ್ಧೆಯಲ್ಲಿ ನೈಋತ್ಯ ರೈಲ್ವೆಯು ಒಟ್ಟಾರೆ ರನ್ನರ್-ಅಪ್ ಪ್ರಶಸ್ತಿ ಪಡೆಯಲು ಸಹಕಾರಿಯಾಗಿದೆ.

ಈ ಸಾಧನೆಯು ಆರ್‍ಪಿಎಫ್ ಸಿಬ್ಬಂದಿಯ ವೃತ್ತಿಪರ ಸಾಮರ್ಥ್ಯ, ಕರ್ತವ್ಯನಿಷ್ಠೆ ಮತ್ತು ತನಿಖಾ ಪರಿಣತಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ನೈಋತ್ಯ ರೈಲ್ವೆಗೆ ಹೆಮ್ಮೆ ತಂದಿದೆ. ನೈಋತ್ಯ ರೈಲ್ವೆಯು ಸಿ. ಶಿವರಾಜು ಅವರನ್ನು ಈ ಗಮನಾರ್ಹ ಸಾಧನೆಗಾಗಿ ಅಭಿನಂದಿಸುತ್ತದೆ ಮೈಸೂರು ವಿಭಾಗದ ವಾಣಿಜ್ಯ ವಿಭಾಗೀಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಅವರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 36ನೇ ಅಖಿಲ ಭಾರತ ಅಂತರ್-ರೈಲ್ವೆ ಆರ್.ಪಿ.ಎಫ್. ವೈಜ್ಞಾನಿಕ ತನಿಖಾ ವಿಧಾನಗಳ ಸ್ಪರ್ಧೆ : ನೈರುತ್ಯ ರೈಲ್ವೆ ಗಮನಾರ್ಹ ಸಾಧನೆ, 3 ಚಿನ್ನ, 1 ಬೆಳ್ಳಿ-ಕಂಚು ಪದಕ Rating: 5 Reviewed By: karavali Times
Scroll to Top