ದಸರಾ ಮಹೋತ್ಸವ ಹಿನ್ನಲೆ : ವಾಹನ ಸವಾರರಿಗೆ ಮಂಗಳೂರು ಪೊಲೀಸ್ ಇಲಾಖೆಯಿಂದ ಸಂಚಾರಿ ಸಲಹೆ-ಸೂಚನೆ - Karavali Times ದಸರಾ ಮಹೋತ್ಸವ ಹಿನ್ನಲೆ : ವಾಹನ ಸವಾರರಿಗೆ ಮಂಗಳೂರು ಪೊಲೀಸ್ ಇಲಾಖೆಯಿಂದ ಸಂಚಾರಿ ಸಲಹೆ-ಸೂಚನೆ - Karavali Times

728x90

10 October 2026

ದಸರಾ ಮಹೋತ್ಸವ ಹಿನ್ನಲೆ : ವಾಹನ ಸವಾರರಿಗೆ ಮಂಗಳೂರು ಪೊಲೀಸ್ ಇಲಾಖೆಯಿಂದ ಸಂಚಾರಿ ಸಲಹೆ-ಸೂಚನೆ

ಮಂಗಳೂರು, ಅಕ್ಟೋಬರ್ 10, 2026 (ಕರಾವಳಿ ಟೈಮ್ಸ್) : ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಅಕ್ಟೋಬರ್ 11 ರಿಂದ 21 ರವರೆಗೆ ಪ್ರತಿದಿನ ಸಂಜೆ 4 ಗಂಟೆಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ವಿವಿಧ ಗಣ್ಯರು ಹಾಗೂ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೂಳೂರು ಫೆರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಪೊಲೀಸ್ ಇಲಾಖೆ ಸೂಚಿಸಿದೆ. 

ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿರುವ ರಸ್ತೆಗಳು : 

ಕೂಳೂರು ಫೆರಿ ರಸ್ತೆ : ಕಾರ್ ಸ್ಟ್ರೀಟ್-ಬಾಲಾಜಿ ಜಂಕ್ಷನ್-ನ್ಯೂ ಚಿತ್ರಾ ಜಂಕ್ಷನ್-ಅಳಕೆ ಬ್ರಿಡ್ಜ್-ಕುದ್ರೋಳಿ ದೇವಸ್ಥಾನದ ದ್ವಾರ-ದುರ್ಗಾಮಹಲ್ ಜಂಕ್ಷನ್-ಮಣ್ಣಗುಡ್ಡೆ ಜಂಕ್ಷನ್.

ಸಂಜೆ ವೇಳೆಯಲ್ಲಿ ವಾಹನಗಳು ಸಂಚರಿಸಬಹುದಾದ ಪರ್ಯಾಯ ಮಾರ್ಗಗಳು : 

ಕೊಟ್ಟಾರ ಚೌಕಿ ಕಡೆಯಿಂದ ಕಾರ್ ಸ್ಟ್ರೀಟ್ ಕಡೆಗೆ ಸಂಚರಿಸುವ ವಾಹನಗಳು : ಲಾಲ್‍ಬಾಗ್-ಪಿ.ವಿ.ಎಸ್.-ನವಭಾರತ್ ಮಾರ್ಗವಾಗಿ ಕಾರ್ ಸ್ಟ್ರೀಟ್ ಕಡೆಗೆ ಸಂಚರಿಸುವುದು.

ಕಾರ್ ಸ್ಟ್ರೀಟ್ ನಿಂದ ಕೂಳೂರು ಫೆರಿ ರಸ್ತೆಯ ಕಡೆಗೆ ಸಂಚರಿಸುವ ವಾಹನಗಳು : ನವಭಾರತ್-ಪಿ.ವಿ.ಎಸ್. ಮಾರ್ಗವಾಗಿ ಸಂಚರಿಸುವುದು.

ವಾಹನ ನಿಲುಗಡೆಗೆ ಸಂಬಂಧಿಸಿದ ಸೂಚನೆಗಳು : 

ಕೂಳೂರು ಫೆರಿ ರಸ್ತೆಯಲ್ಲಿ ನ್ಯೂ ಚಿತ್ರಾ ಜಂಕ್ಷನ್ನಿನಿಂದ ಲೇಡಿಹಿಲ್ ವರೆಗೆ ಹಾಗೂ ಸದರಿ ರಸ್ತೆಯನ್ನು ಸಂಪರ್ಕಿಸುವ ರಸ್ತೆಗಳ ಎರಡೂ ಬದಿಗಳಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡಬಾರದು.

ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿರುವ ಪಾರ್ಕಿಂಗ್ ಸ್ಥಳಗಳಲ್ಲಿಯೇ ನಿಲುಗಡೆ ಮಾಡಬೇಕು.

ವಾಹನ ದಟ್ಟಣೆಯನ್ನು ನಿಯಂತ್ರಿಸಲು ಕರ್ತವ್ಯದಲ್ಲಿರುವ ಪೆÇಲೀಸ್ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಾರ್ವಜನಿಕರು ಸುಗಮ ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ವಿನಂತಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ದಸರಾ ಮಹೋತ್ಸವ ಹಿನ್ನಲೆ : ವಾಹನ ಸವಾರರಿಗೆ ಮಂಗಳೂರು ಪೊಲೀಸ್ ಇಲಾಖೆಯಿಂದ ಸಂಚಾರಿ ಸಲಹೆ-ಸೂಚನೆ Rating: 5 Reviewed By: karavali Times
Scroll to Top