ಡಿಸೆಂಬರ್ 7 ರಂದು ಪುತ್ತೂರು ಅಂಚೆ ಅಧೀಕ್ಷಕರ ವಿಭಾಗೀಯ ಕಚೇರಿಯಲ್ಲಿ ಡಾಕ್ ಅದಾಲತ್ - Karavali Times ಡಿಸೆಂಬರ್ 7 ರಂದು ಪುತ್ತೂರು ಅಂಚೆ ಅಧೀಕ್ಷಕರ ವಿಭಾಗೀಯ ಕಚೇರಿಯಲ್ಲಿ ಡಾಕ್ ಅದಾಲತ್ - Karavali Times

728x90

23 November 2026

ಡಿಸೆಂಬರ್ 7 ರಂದು ಪುತ್ತೂರು ಅಂಚೆ ಅಧೀಕ್ಷಕರ ವಿಭಾಗೀಯ ಕಚೇರಿಯಲ್ಲಿ ಡಾಕ್ ಅದಾಲತ್

ಪುತ್ತೂರು, ನವಂಬರ್ 23, 2026 (ಕರಾವಳಿ ಟೈಮ್ಸ್) : 2026 ರ ನವೆಂಬರ್ ತಿಂಗಳ ‘ಡಾಕ್ ಅದಾಲತ್’ ಡಿಸೆಂಬರ್ 7 ರಂದು ಬೆಳಿಗ್ಗೆ 10 ಗಂಟೆಗೆ, ಪುತ್ತೂರು ಅಂಚೆ ಕಚೇರಿಗಳ ಅಧೀಕ್ಷಕರ ಕಚೇರಿಯಲ್ಲಿ ನಡೆಸಲು ನಿಗದಿಪಡಿಸಲಾಗಿದೆ. ಈ ಅದಾಲತ್‍ನಲ್ಲಿ, ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ, ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಿಗೆ ಸಂಬಂಧಿಸಿದ ಅಂಚೆ ಸೇವೆಗಳ ಕುರಿತಾದ ಎಲ್ಲಾ ಸಮಸ್ಯೆಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುತ್ತದೆ.

ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅಥವಾ ಸಲಹೆಗಳನ್ನು ಕಳುಹಿಸಲು ಬಯಸಿದರೆ, ಅವುಗಳನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಿ, ಅದರ ಮೇಲೆ ‘FOR ENQUIRY IN DAK ADALAT’ ಎಂದು ನಮೂದಿಸಿ, ಅಂಚೆ ಕಚೇರಿಗಳ ಅಧೀಕ್ಷಕರು, ಪುತ್ತೂರು ವಿಭಾಗ, ಪುತ್ತೂರು-574201 ಎಂಬ ವಿಳಾಸಕ್ಕೆ ಡಿಸೆಂಬರ್ 5 ರಂದು ಅಥವಾ ಅದಕ್ಕೂ ಮೊದಲು ತಲುಪುವಂತೆ ಕಳುಹಿಸಿಕೊಡಬೇಕು. ಇದರ ಜೊತೆಗೆ ನಿಗದಿತ ಸಮಯದೊಳಗೆ ದೂರವಾಣಿ ಸಂಖ್ಯೆಗಳಾದ 08251-230201, 230295, ವಾಟ್ಸಾಪ್ ಸಂಖ್ಯೆ 9448291073 ಅಥವಾ ಇಮೇಲ್ ವಿಳಾಸ doputtur.ka@indiapost.gov.in ಮೂಲಕವೂ ಸಂಪರ್ಕಿಸಬಹುದಾಗಿದೆ. ಅಲ್ಲದೆ ಡಿ 7 ರಂದು ಬೆಳಿಗ್ಗೆ 10 ಗಂಟೆಗೆ ಅಂಚೆ ಕಚೇರಿಗಳ ಅಧೀಕ್ಷಕರ ಕಚೇರಿ, ಪುತ್ತೂರು ವಿಭಾಗ, ಪುತ್ತೂರು-574201 ಇಲ್ಲಿ ಖುದ್ದಾಗಿ ಹಾಜರಿರಬೇಕೆಂದು ಕೋರಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಡಿಸೆಂಬರ್ 7 ರಂದು ಪುತ್ತೂರು ಅಂಚೆ ಅಧೀಕ್ಷಕರ ವಿಭಾಗೀಯ ಕಚೇರಿಯಲ್ಲಿ ಡಾಕ್ ಅದಾಲತ್ Rating: 5 Reviewed By: karavali Times
Scroll to Top